ಡಾ. ವಿಷ್ಣುವರ್ಧನ್ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ: ಎಚ್ ವಿ ರಾಜೀವ್

ಮೈಸೂರು:‌ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರು ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದು ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಬಣ್ಣಿಸಿದರು.

ಮೈಸೂರಿನ ಉದ್ಬೂರ್ ಗೇಟ್ ನಲ್ಲಿರುವ ಕರ್ನಾಟಕ ರತ್ನ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ನೂತನವಾಗಿ ಡಾಕ್ಟರ್ ವಿಷ್ಣು ಸ್ಮಾರಕ ಸೇನಾ ಸಮಿತಿ ಸಂಘಟನೆಯನ್ನು
ದೀಪ ಬೆಳಗಿಸಿ ಡಾಕ್ಟರ್ ವಿಷ್ಣು ವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ವಿಷ್ಣುವರ್ಧನ್ ಅವರು
ಕನ್ನಡ ನಾಡು,ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದರು,ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಅವರ ಜೀವನ ಕಿರಿಯ ನಟರಿಗೆ ಮಾದರಿ ಎಂದು ಎಚ್ ವಿ ರಾಜೀವ್ ಹೇಳಿದರು.

ಇದೇ ಸಂದರ್ಭದಲ್ಲಿ ಎಚ್ ವಿ ರಾಜೀವ್ ಮತ್ತು ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ಮುತ್ತಣ್ಣ,ಆಲ್ವಿನ್
ಅವರು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸಂಘಟನೆಯ ನೇಮಕ ಪತ್ರವನ್ನು ವಿತರಿಸಿದರು.

ಸಂಘಟನೆಯ ಗೌರವಾಧ್ಯಕ್ಷರಾಗಿ ಸುರೇಶ್ (ಈರುಳ್ಳಿ), ಶಾಂತಕುಮಾರಿ, ಎಂ ಜಿ ಆರ್ ಮಣಿ, ಎಂ ಡಿ ಪಾರ್ಥಸಾರಥಿ, ಅಧ್ಯಕ್ಷರಾಗಿ ಬೆಂಕಿ ಮಹಾದೇವ್, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು, ಖಜಾಂಚಿ ಮಹದೇವಸ್ವಾಮಿ ಹಾಗೂ ಮಾರ್ಗದರ್ಶಕರಾಗಿ ಬಸವರಾಜ್, ಜೀವಧಾರ ಗಿರೀಶ್, ಆನಂದ್ ಶೆಟ್ಟಿ,ವಿಕ್ರಂ ಅಯ್ಯಂಗಾರ್, ಸತೀಶ್ ಕುಮಾರ್, ಸಂಘಟನೆ ನಿರ್ದೇಶಕರಾಗಿ ಸ್ವಾಮಿ, ಬಸವರಾಜ್, ಯೋಗೇಶ್, ಶಿವು,ವಿಶ್ವನಾಥ್ ಅವರುಗಳಿಗೆ ನೇಮಕ ಪತ್ರ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಚಂದನ ಶ್ರೀನಿವಾಸ್ ಅವರು ವಿಷ್ಣುವರ್ಧನ್ ಅವರು ನಟಿಸಿರುವ ಚಿತ್ರಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು.

ಇದೇ ವೇಳೆ ಅಭಿಮಾನಿಗಳಿಗೆ ಅನ್ನದಾನ ಮಾಡಲಾಯಿತು.