ಹುಣಸೂರು: ಹುಣಸೂರಿನ ತಾಲೂಕು ಕಚೇರಿಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ಕನಕ ಜಯಂತಿ ಯಲ್ಲಿ ಎಲ್ಲ ಗಣ್ಯರು ದಾಸ ಶ್ರೇಷ್ಠರನ್ನು ಸ್ಮರಿಸಿದರು.
ನಗರಸಭಾ ಆಯುಕ್ತರಾದ ಮಾನಸ ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಕುರುಬ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ಸಮಾಜದ ಮುಖಂಡರು ಪಟ್ಟಣದ ನಾಗರೀಕರು ಪಾಲ್ಗೊಂಡಿದ್ದರು.
ಈ ವೇಳೆ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರ ಇಟ್ಟು ಪೂಜಿಸಿ ನಮನ ಸಲ್ಲಿಸಿದರು.
