ಜಗದ್ಗುರು ಶ್ರೀ ಶಿವರಾತ್ರಿಶ್ವರ ಆಟೋ ಚಾಲಕ ಮಾಲೀಕರ ಸಂಘದಿಂದ ರಾಜ್ಯೋತ್ಸವ

Spread the love

ಮೈಸೂರು, ನವೆಂಬರ್. ೧: ಮೈಸೂರಿನ ರಾಮಾನುಜ ರಸ್ತೆ ಜೆಎಸ್ಎಸ್ ಆಸ್ಪತ್ರೆ ಹಳೇ ಗೇಟ್ ಮುಂಭಾಗ ಜಗದ್ಗುರು ಶ್ರೀ ಶಿವರಾತ್ರಿಶ್ವರ ಆಟೋ ಚಾಲಕ, ಮಾಲೀಕರ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕನ್ನಡ ಧ್ವಜಾರೋಹಣವನ್ನು ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್ ಶ್ರೀವತ್ಸ,ಚಲನಚಿತ್ರ ನಿರ್ಮಾಪಕರಾದ ಪಾರ್ಥಸಾರಥಿ,ವಿಧಾನ ಪರಿಷತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ನಗರಪಾಲಿಕೆ ಮಾಜಿ ಸದಸ್ಯರಾದ ಶೋಭಾ ಸುನಿಲ್,ಬಿ.ವಿ ಮಂಜುನಾಥ್, ಫೋಟೋ ಮಹೇಶ್,ಕೆ.ಆರ್. ಬ್ಯಾಂಕ್ ಅಧ್ಯಕ್ಷರಾದ ಬಸವಾರಾಜ್ ಬಸಪ್ಪ, ಕನ್ನಡ ಕ್ರಾಂತಿದಳದ ಅಧ್ಯಕ್ಷರಾದ ತೇಜಸ್ವಿ ನಾಗಲಿಂಗ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಯೋಗೇಶ್, ಗಣೇಶ್, ಮಲ್ಲೇಶ್, ಜೆ ಎಸ್ ಎಸ್ ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು.

ನಂತರ ಶಾಲಾ ಮಕ್ಕಳಿಗೆ ಸಂಘದ ಅಧ್ಯಕ್ಷ ಆಟೋ ಮಹೇಶ್ ಅವರ ನೇತೃತ್ವದಲ್ಲಿ ಪುಸ್ತಕ ವಿತರಣೆ ಮಾಡಲಾಯಿತು.

ಕನ್ನಡ ಕ್ರಾಂತಿದಳದ ಅಧ್ಯಕ್ಷರಾದ ತೇಜಸ್ವಿ ನಾಗಲಿಂಗ ಸ್ವಾಮಿ‌ ಮತ್ತಿತರರನ್ನು ಶಾಸಕ ಶ್ರೀವತ್ಸ ಅವರು ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು.