ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ:ನಾಗರಾಜು

Spread the love

ನಂಜನಗೂಡು,ನವೆಂಬರ್. ೧: ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ನಾಗರಾಜ್ ತಿಳಿಸಿದರು.

ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಎನ್. ನಾಗರಾಜ್ ಅವರು, ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿ, ಕನ್ನಡ ನೆಲದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಭೌತಶಾಸ್ತ್ರ ಉಪನ್ಯಾಸಕ ಹೆಚ್.ಎಸ್ ರಾಮನುಜಾ ಅವರು ಮಾತನಾಡಿ, ಕನ್ನಡ ಭಾಷೆಯು ನಮ್ಮ ಅಸ್ತಿತ್ವ, ಆತ್ಮವಿಶ್ವಾಸ ಮತ್ತು ಸಂಸ್ಕೃತಿಯ ಮೂಲ ಎಂದು ಹೇಳಿದರು.

ರಾಜ್ಯೋತ್ಸವ ಎಂದರೆ ಕೇವಲ ಆಚರಣೆ ಅಲ್ಲ ಕನ್ನಡಿಗನ ಭಾವ, ಮಾನವೀಯತೆ ಮತ್ತು ಸಾಹಿತ್ಯ ಪರಂಪರೆಯ ನೆನಪು. ಯುವಕರು ಕನ್ನಡವನ್ನು ಕೇವಲ ಮನೆ ಮಾತುಗಳಲ್ಲಿ ಮಾತ್ರವಲ್ಲ, ತಂತ್ರಜ್ಞಾನ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲೂ ಬಳಸಬೇಕು. ಕನ್ನಡಕ್ಕೆ ನಮ್ಮ ಪ್ರೀತಿ ಕೃತಿಯಲ್ಲಿ ವ್ಯಕ್ತವಾಗಬೇಕು ಎಂದು ಸಲಹೆ ನೀಡಿದರು.

ಆಂಗ್ಲ ಭಾಷಾ ಉಪನ್ಯಾಸಕ ರಂಗಸ್ವಾಮಿ ಅವರು ಮಾತನಾಡಿ,ಭಾಷೆ ಒಂದು ಜನಾಂಗದ ಒಗ್ಗಟ್ಟಿನ ಸಂಕೇತ. ಕನ್ನಡ ನಮ್ಮ ಅಸ್ತಿತ್ವ.ಕನ್ನಡಿಗರು ತಮ್ಮ ಭಾಷೆಯನ್ನು ಗೌರವಿಸಿದಾಗಲೇ ನಾಡು ಗೌರವ ಪಡೆಯುತ್ತದೆ,ಕನ್ನಡಕ್ಕೆ ಬೆಳಕನ್ನು ನೀಡೋಣ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಕನ್ನಡವು ಕೇವಲ ಭಾಷೆ ಅಲ್ಲ ಅದು ಸಾವಿರಾರು ವರ್ಷಗಳ ಸಂಸ್ಕೃತಿ, ಸಾಹಿತ್ಯ ಮತ್ತು ಮೌಲ್ಯಗಳ ಸಂಗ್ರಹ ಎಂದು ‌ಬಣ್ಣಿಸಿದರು.

ಇಂದಿನ ಕಾಲದಲ್ಲಿ ಕನ್ನಡದ ಬಳಕೆ ಹೆಚ್ಚಿಸುವುದು ಪ್ರತಿ ಯುವಕರ ಜವಾಬ್ದಾರಿ. ಸರ್ಕಾರದಿಂದ ಮಾತ್ರ ಭಾಷೆ ಉಳಿಯುವುದಿಲ್ಲ. ಸರ್ಕಾರಿ ಉದ್ಯೋಗಿ, ವಿದ್ಯಾರ್ಥಿ, ಶಿಕ್ಷಕ, ವ್ಯಾಪಾರಿ,ಹೀಗೆ ಯಾರೇ ಆಗಲಿ, ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡ ಬಳಕೆ ಮಾಡಿದಾಗಲೇ ನಾಡು ಶಕ್ತಿಯಾಗಿ ಹೊರಹೊಮ್ಮುತ್ತದೆ. ಕನ್ನಡ ರಾಜ್ಯೋತ್ಸವವು ನಮ್ಮಲ್ಲಿ ಭಾಷಾಭಿಮಾನ ಮತ್ತು ಕರ್ತವ್ಯ ಭಾವಗಳನ್ನು ಬೆಳೆಸುವ ದಿನ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಕರಾದ ಲಿಂಗಣ್ಣಸ್ವಾಮಿ ,ಟಿ.ಕೆ ರವಿ, ರೂಪ ,ಭವ್ಯ ,ಮೀನಾ, ಸುಮಿತ್ರ ,ವತ್ಸಲ ನಾಗರಾಜ ರೆಡ್ಡಿ, ಅಂಬಿಕಾ ,ಗೋಪಾಲ್ ಹರೀಶ್, ಮಿಲ್ಟನ್ ,ನಿಂಗಯ್ಯ, ಮಾದೇವಸ್ವಾಮಿ, ಹೆಚ್ .ಕೆ.ಪ್ರಕಾಶ್, ದಿನೇಶ್ ಎನ್ ಮತ್ತಿತರರು ಪಾಲ್ಗೊಂಡಿದ್ದರು.