ಸಂತ ಫಿಲೋಮಿನಾ ಕಾಲೇಜಿನಲ್ಲಿ ಏಕತೆಗೆ ಓಟ ಕಾರ್ಯಕ್ರಮ

ಮೈಸೂರು: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಏಕತೆಗೆ ಓಟ ಕಾರ್ಯಕ್ರಮವನ್ನು ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.

ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಚಾರ ಸಚಿವಾಲಯ, ಸಂತ ಫಿಲೋಮಿನಾ ಕಾಲೇಜು ಎನ್‌ಎಸ್‌ಎಸ್‌ ಘಟಕ, ರೇಂಜರ್ಸ್‌ ಅಂಡ್‌ ರೋವರ್‌ ಸ್ಪೋರ್ಟ್ಸ್‌ ಸಂಯುಕ್ತಾಶ್ರಯದಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಜನ್ಮದಿನದ ಅಂಗವಾಗಿ ಏಕತೆಗೆ ಓಟ ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರ ಪ್ರಚಾರ ಅಧಿಕಾರಿ ಎಸ್‌.ಟಿ. ಶೃತಿ, ಕಾಲೇಜಿನ ಪ್ರಾಂಶುಪಾಲರು, ಆಡಳಿತಾಧಿಕಾರಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು, ರೆಡ್‌ಕ್ರಾಸ್‌ ಕಾರ್ಯಕರ್ತರು, ಅಥ್ಲೀಟ್‌ಗಳು, ಎನ್‌ಎಸ್‌ಎಸ್‌ ಸಂಯೋಜಕರು, ರೆಡ್‌ಕ್ರಾಸ್‌ ಮತ್ತು ರೇಂಜರ್ಸ್‌ ಅಂಡ್‌ ರೋವರ್ಸ್‌ ಸಂಯೋಜಕರು ಪಾಲ್ಗೊಂಡಿದ್ದರು.

ಇದೇ ವೇಳೆ ಎಲ್ಲರೂ ಏಕತೆಗಾಗಿ ಪ್ರತಿಜ್ಞೆ ಸ್ವೀಕರಿಸಿದರು.