ಅವಳ ಹೆಜ್ಜೆ ಕಿರುಚಿತ್ರೋತ್ಸವ-2026‌ ಸ್ಪರ್ಧೆ:ನವೆಂಬರ್ ಗೆ ಉಚಿತ ನೋಂದಣಿ ಅವಕಾಶ

Spread the love

ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಹಮ್ಮಿಕೊಂಡಿರುವ ಅವಳ ಹೆಜ್ಜೆ ಕಿರುಚಿತ್ರೋತ್ಸವ-2026 ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರ ಸ್ಪರ್ಧೆಗೆ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್‌ನಲ್ಲಿ ಉಚಿತ ನೋಂದಣಿಗೆ‌ ಅವಕಾಶ ಕಲ್ಪಿಸಲಾಗಿದೆ.

ಮೊದಲ ಆವೃತ್ತಿಯ ಅದ್ಭುತ ಯಶಸ್ಸಿನ ನಂತರ, ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ ಎರಡನೆಯ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ಮಹಿಳಾ ನಿರ್ದೇಶಕರಿಂದ ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ ನೋಂದಣಿಯನ್ನು ಆಹ್ವಾನಿಸಲಾಗಿದೆ.

ಇದು ಮಹಿಳಾ ನಿರ್ದೇಶಕರಿಗೇ ಮೀಸಲಾದ ಏಕೈಕ ಕನ್ನಡ ಕಿರುಚಿತ್ರ ಸ್ಪರ್ಧೆಯಾಗಿದೆ

ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ 1,00,000 ನಗದು ‌ಬಹುಮಾನ ಇರುತ್ತದೆ.
ಹಲವಾರು ವಿಶೇಷ ವಿಭಾಗಗಳಲ್ಲಿ ತಲಾ ಒಂದು ಕಿರುಚಿತ್ರಕ್ಕೆ 10,000 ನಗದು ಬಹುಮಾನ ಇರಲಿದೆ.

ನೋಂದಣಿ ವಿವರಗಳು:
ಸಲ್ಲಿಕೆ ಅರ್ಹತೆ: ನಿರ್ದೇಶಕರು ಮಹಿಳೆಯೇ ಆಗಿರಬೇಕು; 5-30 ನಿಮಿಷ; 2024, 2025 ಅಥವಾ 2026ರಲ್ಲಿ ನಿರ್ಮಿತ ಕನ್ನಡ ಕಿರುಚಿತ್ರಗಳು.

ಪ್ರವೇಶ ಶುಲ್ಕ: ನವೆಂಬರ್‌ನಲ್ಲಿ ಉಚಿತವಿರುತ್ತದೆ (ರಾಜ್ಯೋತ್ಸವ ವಿಶೇಷ); ಡಿಸೆಂಬರ್ 1 ರಿಂದ ಜನವರಿ 31, 2026 ರವರೆಗೆ 1,000 ರೂ ಶುಲ್ಕ ಕಟ್ಟಬೇಕಿದೆ.

ಹೆಚ್ಚಿನ ಮಾಹಿತಿಗೆ www.gubbivanitrust.ngo | Whats App: 8867747236 ಸಂಪರ್ಕಿಸಬಹುದು
ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.