ಮೈಸೂರು: ವಿಜಯಪುರ ಸಿಂದಗಿಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ 2024- 25 ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟದ 86 ಕೆಜಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಯಲ್ಲಿ ಮೈಸೂರಿನ
ಸಂಜಯ್ ಚಂದ್ರ ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ವಾಣಿಜ್ಯ ದ್ವಿತೀಯ ಪಿಯು ವಿಭಾಗದಲ್ಲಿ ಪೈಲ್ವಾನ್ ಸಂಜಯ್ ಚಂದ್ರ ಜೆ ಅವರು ವ್ಯಾಸಂಗ ಮಾಡುತ್ತಿದ್ದಾರೆ.
ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಯಲ್ಲಿ
ಅವರು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಾಮುಂಡಿ ಕ್ರೀಡಾಂಗಣದ ನಿರ್ದೇಶಕರು ಭಾಸ್ಕರ್ ನಾಯಕರ ನೇತೃತ್ವದಲ್ಲಿ ಪೈಲ್ವಾನ್ ಮಧುರವರ ಶಿಷ್ಯ ಮತ್ತು ಶಂಕರ್ ಚಾಮುಂಡಿ ಕ್ರೀಡಾಂಗಣದ ವಿಶ್ವಾ ಅವರಿಂದ
ಸಂಜಯ್ ಚಂದ್ರ ಜೆ ಅವರು
ತರಬೇತು ಪಡೆದಿದ್ದಾರೆ.
ಸಂಜಯ್ ಚಂದ್ರ ಜೆ ಅವರನ್ನು ಸದ್ವಿದ್ಯಾ ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳು ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಕರು, ಪ್ರಾಧ್ಯಾಪಕರು ಗೌರವಿಸಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಲು ಆಶೀರ್ವದಿಸಿದರು.
ಈ ವೇಳೆ ಕಾರ್ಯದರ್ಶಿ ಎಂ ಡಿ ಗೋಪಿನಾಥ್, ಪ್ರಾಂಶುಪಾಲರಾದ ರಮೇಶ್ ವೈ.ಆರ್ ,ದೈಹಿಕ ಶಿಕ್ಷಣ ಉಪನ್ಯಾಸಕರಾದ ಕೃಷ್ಣ ಬಿ.ವಿ , ಸಂಜಯ್ ಚಂದ್ರ ಅವರ ಪೋಷಕರಾದ ಜಯಚಂದ್ರ ಅವರು ಶುಭ ಕೋರಿದರು.

