ಮೈಸೂರು: ಮನುಷ್ಯ ಎಷ್ಟೇ ಹಣವಂತನಾದರೂ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣವಿಲ್ಲದೆ ಇದ್ದರೆ ಪ್ರಯೋಜನವಿಲ್ಲ ಎಂದು ಸಂಸ್ಕೃತ ಪಾಠ ಶಾಲೆಯ ಪ್ರಾಶುಂಪಲಾರಾದ ಸತ್ಯನಾರಾಯಣ್ ತಿಳಿಸಿದರು.
ನಗರದ ಸಯಾಜಿ ರಾವ್ ರಸ್ತೆಯಲ್ಲಿರುವ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಸೇವಾ ಕಾರ್ಯದ ಹಿನ್ನೆಲೆಯಲ್ಲಿ ನೋಟ್ ಬುಕ್,ಹಣ್ಣು ಹಂಪಲು ವಿತರಿಸಿದ ವೇಳೆ ಅವರು ಮಾತನಾಡಿದರು.
ದಾನಮಾಡುವ ಮನಸ್ಸು ಮುಖ್ಯವಾಗಿರುತ್ತದೆ.ಇತರರಿಗೆ ಒಳಿತು ಮಾಡುವ ಯಾವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ನಾಳಿನ ಬಗ್ಗೆ ಬಲ್ಲವರಾರು ನಾವು ಎಷ್ಟು ಸಂತೋಷದಿಂದ ತಿಂದುಂಡು ಬದುಕಿದೆವು ಎನ್ನುವುದಕ್ಕಿಂತ ನಾವು ಪರರ ಕಷ್ಟ ಸುಖಗಳಿಗೆ ಹೇಗೆ ನೆರವಾದೆವು ಭರವಸೆಯ ಬೆಳಕಾದೆವು ಎನ್ನುವುದೇ ಜೀವನದ ಪರಿಪೂರ್ಣತೆ ಎಂದು ಸತ್ಯನಾರಾಯಣ್ ತಿಳಿಸಿದರು.
ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗವು ನಿರಂತರವಾಗಿ ವಾರಕ್ಕೊಮ್ಮೆ ಒಂದಲ್ಲ ಒಂದು ಕಡೆ ಸೇವಾ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಛಾಯ,ಗಾಯಕ ಯಶವಂತ್ ಕುಮಾರ್, ಭವ್ಯ,ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಎಸ್. ಪಿ.ಅಕ್ಷಯ್ ಪ್ರಿಯಾದರ್ಶನ್, ದತ್ತ,ಹರ್ಷಿತ್ ಎಸ್ ನಾಗೇಶ್, ಸಂಸ್ಕೃತ ಪಾಠಶಾಲೆಯ ಶಿಕ್ಷಕರುಗಳಾದ ಸುಮಂತ್, ಸಿ. ಎಸ್.ವೀರಪ್ಪಾಜಿ, ಕುಮಾರ್ ಭಟ್ಟ್ ಬೋರೇಗೌಡ, ಶರ್ಮ ಗಣಪತಿ, ರಾಜು ಮತ್ತಿತರರು ಹಾಜರಿದ್ದರು.

