ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿರುವ ದಕ್ಷಿಣ ಕಾಶಿ ಖ್ಯಾತಿಯ ನಂಜುಂಡೇಶ್ವರನ ದರ್ಶನವನ್ನು ಚಲನಚಿತ್ರ ನಟ ವಸಿಷ್ಟ ಸಿಂಹ ದಂಪತಿ ಪಡೆದರು.
ಈ ವೇಳೆ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಅವರ ನೇತೃತ್ವದಲ್ಲಿ ವಶಿಷ್ಟ ಸಿಂಹ ಹರಿಪ್ರಿಯಾ ದಂಪತಿಯನ್ನು ಸನ್ಮಾನಿಸಿ ಶುಭ ಕೋರಲಾಯಿತು.
ಇದೇ ಸಂದರ್ಭದಲ್ಲಿ ಉದ್ಯಮಿ ಮಹದೇವ್ ಅವರ ಪುತ್ರಿಯ ಮದುವೆ ಆಮಂತ್ರಣ ಪತ್ರವನ್ನು ನೀಡಿ ಆಹ್ವಾನಿಸಲಾಯಿತು.
ಈ ವೇಳೆ ಹಿಂದುಳಿದ ವರ್ಗದ ಉಪಾಧ್ಯಕ್ಷ ರಾಮಪ್ಪ ರಮೇಶ್, ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕಡಕೋಳ ಶಿವಲಿಂಗ, ದಿನೇಶ್ ಪಾಂಡುಪುರ, ವಿಕ್ರಮ ಆಯಂಗಾರ್, ಬೈರತಿ ಲಿಂಗರಾಜು, ಅಜಯ್ ಶಾಸ್ತ್ರಿ ಸೇರಿದಂತೆ ಹಲವು ಮುಖಂಡರು ಅಭಿಮಾನಿಗಳು ಹಾಜರಿದ್ದರು.

