ಮೈಸೂರು: ಕೆ.ಆರ್.ನಗರ ಶಾಸಕ ರವಿಶಂಕರ್ ಅವರ ಆಪ್ತರೆಂದು ಹೇಳಲಾದ ಲೋಹಿತ್ ವಿರುದ್ದ ಪ್ರಕರಣ ದಾಖಲಾಗಿದೆ.
ಲೋಹಿತ್ ಕುರಿತಾದುದು ಎನ್ನಲಾದ ವಿಡಿಯೋದಲ್ಲಿರುವ ಯುವತಿಯ ತಂದೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು
ಲೋಹಿತ್ ಶಾಸಕ ರವಿಶಂಕರ್ ಅವರ ಆಪ್ತರಲ್ಲಿ ಒಬ್ಬ ಎಂದು ಹೇಳಲಾಗಿದೆ.
ಮಾಯಿಗೌಡನಹಳ್ಳಿ ಗ್ರಾಮದ ಸೋಮೇಗೌಡ ಎಂಬವರ ಮೂಲಕ ದೂರು ನೀಡಲಾಗಿದೆ.
ಹಾಡ್ಯ ಗ್ರಾಮದ ಯುವತಿ ಜೊತೆ ಚಕ್ಕಂದವಾಡುವ ವಿಡಿಯೋ ವೈರಲ್ ಆಗಿದೆ.
ಲೋಹಿತ್ @ ರಾಜಿ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮೂರು ತಿಂಗಳ ಹಿಂದೆ ಯುವತಿಗೆ ಬೇರೊಬ್ಬರ ಜೊತೆ ವಿವಾಹ ಮಾಡಿಕೊಡಲಾಗಿತ್ತು.ಆದರೆ
ವೈಯ್ಯಕ್ತಿಕ ಲಾಭಕ್ಕಾಗಿ ವಿಡಿಯೋ ಹರಿಬಿಟ್ಟಿದ್ದಾರೆಂದು ಯುವತಿ ತಂದೆ ದೂರು ನೀಡಿದ್ದಾರೆ.
ಜಮೀನಿನ ವಿಚಾರಕ್ಕೆ ಲೋಹಿತ್ ದ್ವೇಷ ಮಾಡುತ್ತಿದ್ದ.ಮಗಳ ಜೊತೆಗಿನ ಖಾಸಗಿ ವಿಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾನೆ.
ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ
ತಕ್ಷಣ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ಹೆಸರಿನಲ್ಲಿ ತಂದೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಾಗಿರುವುದು ಗೊತ್ತಾದ ಕೂಡಲೆ ಲೋಹಿತ್ ತಲೆಮರೆಸಿ ಕೊಂಡಿರುವುದಾಗಿ ತಿಳಿದುಬಂದಿದೆ.