ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ
ವಿಶೇಷ ಕಾರ್ಯಕ್ರಮ ಹಮ್ಮಿಕೊಮನಡು ಅಂಧಕಾರದ ಮೇಲೆ ಬೆಳಕಿನ ಜಯದ ಸಂದೇಶವನ್ನು ಹಂಚಿಕೊಂಡರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರ್ಚಕ ಸಿಬ್ಬಂದಿಗಳು, ಪೌರಕಾರ್ಮಿಕರು ಹಾಗೂ ಮಹಿಳೆಯರಿಗೆ ಕುಂಕುಮ, ಅರಿಶಿಣ, ಹೂ, ಬ್ಲೌಸ್ ಪೀಸ್,ಹಣತೆ ವಿತರಿಸುವ ಮೂಲಕ ಸಂತಸದ ಬೆಳಕು ಹಂಚುವ ಮನಮುಟ್ಟುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪಾಯಿ ಅವರು,ದೀಪಾವಳಿಯ ನಿಜವಾದ ಅರ್ಥ ಎಂದರೆ ಸಂತೋಷ ಹಂಚುವುದು ಮತ್ತು ಬೆಳಕನ್ನು ಹರಡುವುದು ಎಂದು ಹೇಳಿದರು.
ಒಂದು ದೀಪದಿಂದ ಸಾವಿರ ದೀಪಗಳು ಬೆಳಗುವಂತೆ, ಒಬ್ಬನಿಂದ ಹಲವರ ಮನದ ಬೆಳಕು ಹಂಚಿಕೊಳ್ಳುವ ಹಬ್ಬವೇ ದೀಪಾವಳಿ ಎಂದು ಈ ಕಾರ್ಯಕ್ರಮ ಸಾರುತ್ತದೆ
ಎಂದು ತಿಳಿಸಿದರು.
ಶ್ರೀ ದುರ್ಗಾಪಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮಾತನಾಡಿ,
ಪ್ರತಿ ಮನೆಯಲ್ಲೂ ಆಶೆಯ ಬೆಳಕು ಹೊಳೆಯಲಿ ಈ ದೀಪಾವಳಿ ಸಂತಸ ತರಲಿ ಎಂದು ಶುಭ ಕೋರಿದರು.
ಅರಮನೆ ಸಮೂಹ ದೇವಾಲಯಗಳ ವ್ಯವಸ್ಥಾಪಕರಾದ ಕಾವ್ಯ ವಿನಯ್, ರಮ್ಯ ರಾಘವೇಂದ್ರ, ರಶ್ಮೀ, ಗೌರಮ್ಮ, ಸುವರ್ಣಮ್ಮ, ಮಂಜುಳಾ ಸೋಮಣ್ಣ, ಕೋಮಲಾಮಣಿ, ಕಾವ್ಯ, ಶ್ರುತಿ, ದರ್ಶನ, ಮತ್ತಿತರರು ಪಾಲ್ಗೊಂಡಿದ್ದರು.