ಮೈಸೂರು: ನಗರದ ಹೊರವಲಯದ ಇಲವಾಲ ಬಳಿಯ ಜಟ್ಟಿಹುಂಡಿಯಲ್ಲಿ ಪಾಪಿ ಪತಿಯ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಸವಿತಾ(35) ಕೊಲೆಯಾದ ದುರ್ದೈವಿ
ಸವಿತಾ ಜಟ್ಟಿಹುಂಡಿ ಸಂತ ಜೋಸೆಫ್ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದರು. ಆಶ್ರಮದ ಗೇಟ್ ಬಳಿ ಆಕೆಯ ಪತಿ ದೇವರಾಜ್ ಜಗಳ ಮಾಡಿ ಕೋಪದಲ್ಲಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ,ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.