ಕಡೆಗೂ ಹುಣಸೂರು ನಗರಸಭೆ ಮೈದಾನದಿಂದ ವಸ್ತುಪ್ರದರ್ಶನ ಎತ್ತಂಗಡಿ

Spread the love

ಹುಣಸೂರು: ಹುಣಸೂರು ನಗರಸಭಾ ಮೈದಾನದಲ್ಲಿ ನಡೆಯುತ್ತಿದ್ದ ಮನರಂಜನಾ ವಸ್ತುಪ್ರದರ್ಶನದ ಅವಧಿ ಮುಗಿದಿದ್ದರೂ, ಇನ್ನೂ ತೆರವುಗೊಳಿಸಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ.

ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ದವರು ಪ್ರತಿಭಟನೆ ಮಾಡಿ ವಸ್ತುಪ್ರದರ್ಶನ ತೆರವಿಗೆ ಪಟ್ಟು ಹಿಡಿದರು.

ಹಾಗಾಗಿ ನಗರಸಭೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ವಸ್ತುಪ್ರದರ್ಶನ ತೆರವಿಗೆ ಆದೇಶಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಗುರುವಾರ ಸಂಜೆವರೆಗೂ ವಸ್ತುಪ್ರದರ್ಶನ ಎತ್ತಂಗಡಿ ಕಾರ್ಯ ಮುಂದುವರಿಯಿತು.

ನಗರಸಭೆ ಆಟದ ಮೈದಾನವನ್ನು ಮನರಂಜನ ವಸ್ತು ಪ್ರದರ್ಶನ ಮಾಡಿಕೊಂಡಿದ್ದರಿಂದ ಶಾಲಾ ಮಕ್ಕಳಿಗೆ ಆಟವಾಡಲು ತೊಂದರೆಯಾಗಿದೆ ಮತ್ತು ಸುತ್ತಮುತ್ತಲ ವ್ಯಾಪಾರಿಗಳಿಗೂ ನಷ್ಟವಾಗಿದೆ.ವಾಯುವಿಹಾರಿಗಳಿಗೂ ತೊಂದರೆಯಾಗುತ್ತಿದೆ ಎಂಬ ಬಗ್ಗೆ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಸುದ್ದಿ ಪ್ರಸಾರ‌ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಈ ವಸ್ತುಪ್ರದರ್ಶನ ದಿಂದಾಗಿ ಇಡೀ ಆಟದ ಮೈದಾನ ಗಬ್ಬೆದ್ದು ಹೋಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ರಾರಾಜಿಸುತ್ತಿದೆ. ಜೊತೆಗೆ ಶೌಚಾಲಯ ವ್ಯವಸ್ಥೆ ಮಾಡಿರದ ಕಾರಣ ಇಡೀ ಆಟದ ಮೈದಾನ ಗಬ್ಬೆದ್ದು ಹೋಗಿದೆ ಎಲ್ಲಾ ಕಡೆ ಕೆಟ್ಟ ವಾಸನೆ ಬರುತ್ತಿದೆ ಹಾಗಾಗಿ ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಮೈದಾನದಲ್ಲಿ ಸಂಚರಿಸುವುದೇ ದುಸ್ತರವಾಗಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲ ವಸ್ತುಪ್ರದರ್ಶನ ತೆರವುಗೊಳಿಸುವ ವೇಳೆ ಪ್ಲಾಸ್ಟಿಕ್ ಕವರ್ ಗಳು ಮತ್ತಿತರ ಪದಾರ್ಥಗಳನ್ನು ಮೈದಾನದಲ್ಲೇ ಬಿಟ್ಟಿದ್ದು ಬಡಪಾಯಿ ಹಸುಗಳು ತಿನ್ನುತ್ತಿವೆ ಇದರಿಂದ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಯಾರಿಗೆ ಆಗಲಿ ನಗರಸಭೆಯು ವಸ್ತು ಪ್ರದರ್ಶನವನ್ನು ಬಾಡಿಗೆಗೆ ನೀಡುವಾಗ ಕಡ್ಡಾಯವಾಗಿ ಶೌಚಾಲಯ ವ್ಯವಸ್ಥೆ ಮಾಡಲೇ ಬೇಕೆಂದು ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ