ಬೆಂಗಳೂರು: ಎರಡು ವರ್ಷಗಳಿಂದ ಶಾಸಕರಿಗೆ ಅಭಿವೃದ್ಧಿ ನಿಧಿ ಇಲ್ಲ,ಈಗ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ಮತ್ತು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬರೀ 25 ಕೋಟಿ ನೀಡಲಾಗುತ್ತಿದೆ ಎಂದು ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ತಾರತಮ್ಯದ ವಿರುದ್ಧ, ನಮ್ಮ ಶಾಸಕರಾದ ಶ್ರೀ ವೆಂಕಟಶಿವರೆಡ್ಡಿ ಅವರು ಎಲ್ಲಾ ಕ್ಷೇತ್ರಗಳಿಗೂ ಸಮಾನ ನಿಧಿಯನ್ನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು x ಖಾತೆಯಲ್ಲಿ ನಿಖಿಲ್ ಬರೆದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ವರ್ಷ ಕೇವಲ 5 ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ಖರ್ಚು ಮಾಡುತ್ತಿದೆ ಮತ್ತು ರಾಜ್ಯದಲ್ಲಿ 5,229 ಕೋಟಿ ಮೂಲಸೌಕರ್ಯ ವೆಚ್ಚವನ್ನು ಕಡಿತಗೊಳಿಸುತ್ತಿದೆ ಎಂದು ಸಿಎಜಿ ವರದಿ ಹೇಳುತ್ತದೆ.
ಕಾಂಗ್ರೆಸ್ ನಾಯಕರು ಗಳಲ್ಲಿ ರ್ಯಾಲಿಗಳಲ್ಲಿ ಸಂವಿಧಾನವನ್ನು ಬೀಸುತ್ತ “ನ್ಯಾಯ ಮತ್ತು ಸಮಾನತೆ” ಎಂದು ಕೂಗುತ್ತಾರೆ, ಆದರೆ ಅವರ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಅದನ್ನು ಮರೆತೇ ಬಿಡುತ್ತಾರೆ ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.