ಕೆಲಸ ಆದ ಕೂಡಲೇ ಕೈ ಬಿಡುವ ರಾಜಕಾರಣಿಗಳು, ಅಧಿಕಾರಿಗಳಿಗೆ ಧಿಕ್ಕಾರ!

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆಯನ್ನು‌ ಬಾಜಾಭಜಂತ್ರಿ ಸಹಿತ ಅತ್ಯುತ್ಸಾಹದಿಂದ ಕರೆತಂದ ಮೈಸೂರು ಜಿಲ್ಲಾಡಳಿತ ದಸರಾ ಮುಗಿದ ನಂತರ ಆನೆಗಳನ್ನು ಮರೆತೇ ಬಿಟ್ಟಿದ್ದುದು ನಿಜಕ್ಕೂ ದುರ್ದೈವದ ಸಂಗತಿ.

ದಸರೆಗೆ ಕರೆತರುವ ಸಂದರ್ಭದಲ್ಲಿ
ಗಜಪಯಣದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಜಿಲ್ಲಾಡಳಿತ ಹಾಗೂ ರಾಜಕಾರಣಿಗಳು ಜಂಬುಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದಸರಾ ಆನೆಗಳು ಹಾಗೂ ಅವುಗಳ ಕಾವಾಡಿಗಳು ಮಾವುತರನ್ನು ಬಿಳ್ಕೊಡುವ ಕಾರ್ಯಕ್ರಮಕ್ಕೆ
ಗೈರಾದುದು‌ ತುಂಬಾ ಬೇಸರ ಉಂಟುಮಾಡುತ್ತಿದೆ ಎಂದು ಸಾಮಾಜಿಕ‌ ಕಾರ್ಯಕರ್ತ ವಿಕ್ರಮ್ ಅಯ್ಯಂಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಒಂದೂವರೆ ತಿಂಗಳಿಂದ ಆನೆಗಳನ್ನು ಜೋಪಾನವಾಗಿ ನೋಡಿಕೊಂಡ ಮಾವುತರಿಗೆ ಗೌರವದನ ನೀಡದಿರುವುದು
ಕೂಡಾ ಬೇಸರ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಕೆಲಸ ಆದ ಕೂಡಲೇ
ಕೈ ಬಿಡುವ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ನಮ್ಮ ಧಿಕ್ಕಾರ ಎಂದು ವಿಕ್ರಮ ಅಯ್ಯಂಗಾರ್ ಛೀಮಾರಿ ಹಾಕಿದ್ದಾರೆ.