ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಾಡಹಬ್ಬ ದಸರಾ ಪ್ರಯುಕ್ತ ಡಿ ವೈ ಇ ಎಸ್ ಮೈಸೂರು ದಸರಾ 10 ಕಿ.ಮೀ ಓಟ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 28 ರಂದು ಬೆಳಿಗ್ಗೆ 5.30 ಕ್ಕೆ ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂ ನಲ್ಲಿ 10 ಕಿ.ಮೀ ಓಟ ಇದ್ದು,15 ವರ್ಷದಿಂದ 45 ವರ್ಷದವರು ಪಾಲ್ಗೊಳ್ಳಬಹುದು.
ಗೆದ್ದವರಿಗೆ ಪ್ರಥಮ ಸ್ಥಾನ 10,000, ದ್ವಿತೀಯ ಸ್ಥಾನ 7000,ತೃತೀಯ ಸ್ಥಾನ 5000 ಇರುತ್ತದೆ.
ಓಟದಲ್ಲಿ ಭಾಗವಹಿಸಲು ನೋಂದಣಿಗಾಗಿ 8151993256 ಈ ನಂಬರನ್ನು ಸಂಪರ್ಕಿಸಬಹುದು.