ಮೈಸೂರು: ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಲಯನ್ ಕ್ಲಬ್ ಆಫ್ ಮೈಸೂರ್ ಎಲೆಟ್ ಮಂಗಳವಾರ
ಭೇಟಿ ನೀಡಿತು.
ಈ ವೇಳೆ ಎಲ್ಲಾ ನಿರಾಶ್ರಿತ ತಾಯಂದಿರ ಆರೋಗ್ಯ ವಿಚಾರಿಸಿ, ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದರು.
ಮುಂದಿನ ದಿನದಲ್ಲಿ ನಾವೆಲ್ಲರೂ ಜೊತೆಗಿದ್ದು ತಾಯಂದಿರಿಗೆ ಅಗತ್ಯವಾದ ವಸ್ತುಗಳನ್ನು ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಲಯನ್ ಸಂಸ್ಥೆಯ ಪದಾದಿಕಾರಿಗಳಾದ
ಲಯನ್ ಪಾರ್ಥ, ಲಯನ್ ಚಂದ್ರಿಕಾ ಪಾರ್ಥ, ಲಯನ್ ಹೇಮಂತ ಕುಮಾರ್, ಲಯನ್ ಮೇಟಿ, ಲಯನ್ ಸುರೇಶ್. ಬಿ.ಕೆ. ಮತ್ತು ಪಿ ಜಿ ಆರ್ ಎಸ್ ಎಸ್ ಕಾರ್ಯದರ್ಶಿ ಪಲ್ಲವಿ, ಖಜಾಂಚಿ ಮಂಜುಳಾ,ರಾಜ್ಯ ಸಂಚಾಲಕ ರಕ್ತದಾನಿ ಮಂಜು ಉಪಸ್ಥಿತರಿದ್ದರು.