ದಸರಾ: ಸಾಯಿಸಿರಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್, ಹಣ್ಣು ಹಂಪಲು ವಿತರಣೆ

Spread the love

ಮೈಸೂರು: ಮೈಸೂರಿನ ಜೆ.ಪಿ. ನಗರದಲ್ಲಿರುವ ಸಾಯಿಸಿರಿ ವೃದ್ದಾಶ್ರಮದ ತಾಯಂದಿರಿಗೆ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಸೀಲಿಂಗ್ ಫ್ಯಾನ್,ಹಣ್ಣು ಹಂಪಲು ವಿತರಿಸಲಾಯಿತು.

ಈ ವೇಳೆ ತಾಯಂದಿರ ಯೋಗಕ್ಷೇಮ ವಿಚಾರಿಸಿದ ಸ್ನೇಹ ಬಳಗದ ಸದಸ್ಯರು ದಸರಾ ಹಬ್ಬದ ಶುಭಾಶಯಗಳು ತಿಳಿಸಿ ಸೇವಾ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್,ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಛಾಯ,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಭವ್ಯ,ಸುಬ್ರಮಣಿ,ಮಹೇಶ್, ಎಲ್.ಐ.ಸಿ. ವೆಂಕಟೇಶ್, ದತ್ತ ಮತ್ತಿತರರು ಹಾಜರಿದ್ದರು.