ಮೈಸೂರು: ನವರಾತ್ರಿ ಪ್ರಾರಂಭವಾಗಿದ್ದು ಸಾಂಸ್ಕೃತಿಕ ನಗರಿಯಲ್ಲಿ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಶಿಕ್ಷಣ ಇಲಾಖೆಯಲ್ಲೂ
ನವರಾತ್ರಿ ಸಂಭ್ರಮ ಕಾಣಿಸಿತ್ತು.
ನವರಾತ್ರಿ ಹಬ್ಬದ ಮೊದಲ ದಿನದಲ್ಲಿ ಸಾಂಪ್ರದಾಯಿಕ ಬಿಳಿ ಉಡುಗೆ ತೊಟ್ಟು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಿಬ್ಬಂದಿ ಸಂಭ್ರಮಿಸಿದರು.
ಜಂಟಿ ನಿರ್ದೇಶಕರಾದ ಡಾ.ಪ್ರತಿಮಾ.ಡಿ.ಎಸ್ ಅವರೊಂದಿಗೆ ಮಹಿಳಾ ಸಿಬ್ಬಂದಿ ಬಿಳಿ ಉಡುಗೆ ತೊಟ್ಟು ಎಲ್ಲರ ಮನ ಸೆಳೆದರು.