ಮೈಸೂರು: ಲಯನ್ಸ್ ಅಂಬಾಸಿಡರ್ ಸಂಸ್ಥೆ ವತಿಯಿಂದ ಮಹಿಳಾ ಆರ್ಥಿಕ ಸಬಲೀಕರಣ ಸೇವಾ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಸಂಸ್ಥೆಯ ಮಾಸಿಕ ಸಭೆಯಲ್ಲಿ ಕುಂಬಾರ ಕೊಪ್ಪಲಿನ ಕುಮಾರಿ, ಮೆಟಗಳ್ಳಿಯ ಚಂದ್ರಕಲಾ ಮತ್ತು ಹೂಟಗಳ್ಳಿಯ ಗ್ರಾಮೀಣ ಅಭಿವೃದ್ದಿ ರೈತರ ಹೊಲಿಗೆ ಶಾಲೆಗೆ ಹೊಲಿಗೆ ಯಂತ್ರ ನೀಡಲಾಯಿತು.
ಈ ಹೊಲಿಗಿ ಯಂತ್ರಗಳ ಪ್ರಯೋಜಕತ್ವವನ್ನು ಲಯನ್ ಎಂ ಶಿವಕುಮಾರ್, ಲಯನ್ ಟಿ. ಎಚ್. ವೆಂಕಟೇಶ್, ಲಯನ್ ಸಿ.ಆರ್ ದಿನೇಶ್ ಮತ್ತು ನಂದಾ ಮಹೇಶ್ ವಹಿಸಿದ್ದರು.
ನಂದಾ ಮಹೇಶ್ ಅವರು ತಮ್ಮ ಪತಿ ಮಹೇಶ್ ಅವರ ನೆನಪಿಗಾಗಿ ಹೊಲಿಗೆ ಯಂತ್ರವನ್ನು ನೀಡಿದ್ದು ವಿಶೇಷವಾಗಿತ್ತು.
ಈ ಹೊಲಿಗೆ ಯಂತ್ರಗಳ ಮೂಲಕ ಫಲಾನುಭವಿಗಳು ಸ್ವಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಲು ಸಹಾಯವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಲಯನ್ ಡಾ.ಆರ್.ಡಿ. ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ.ಟಿ .ವಿಷ್ಣು, ಖಜಾಂಜಿ ಡಾ.ಜಿ.ಕಿಶೋರ್, ಪ್ರಾಂತೀಯ ಅಧ್ಯಕ್ಷ ಎಚ್. ಸಿ ಕಾಂತರಾಜು, ಸಭೆಯ ಪ್ರಯೋಜಕತ್ವವನ್ನು ಮಾಡಿದ ಲಯನ್ ಎಮ್.ಎನ್. ನಾಗರಾಜ್ ಮತ್ತು ಜಾಹ್ನವಿ ದಿನೇಶ್ ಅವರು ಉಪಸ್ಥಿತರಿದ್ದರು.
