ಮೈಸೂರು: ಸಾಂಸ್ಕೃತಿಕ ಮಹತ್ವ ಹಾಗೂ ಶಕ್ತಿಯ ಆರಾಧನೆಯ ಹಬ್ಬವಾದ ದಸರಾ ಹಬ್ಬದ ಸಂದರ್ಭದಲ್ಲಿ, ಸಮೃದ್ಧಿ ಟ್ರಸ್ಟ್ ವತಿಯಿಂದ ಬನ್ನಿಮಂಟಪ ಮೇದಾರ ಬ್ಲಾಕ್ ನಗರದ ಮಹಿಳೆಯರು, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
ಹಬ್ಬದ ಸಂಭ್ರಮದ ಜೊತೆ ಜೊತೆಗೆ ಆರೋಗ್ಯ ಮತ್ತು ಸ್ವಚ್ಛತೆಯ ಮಹತ್ವದ ಅರಿವು ಮಾಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರಿಗೆ ಬಾಗಿನ ವಿತರಣೆ ಮಾಡಲಾಯಿತು, ದಸರಾ ಹಬ್ಬದ ಪರಂಪರೆಯ ಭಾಗವಗಿ ಕುಂಕುಮ, ಅರಿಶಿನ, ಬಳೆಗಳು ಸೇರಿದಂತೆ ವಿವಿಧ ಹಬ್ಬದ ಸಾಂಪ್ರದಾಯಿಕ ವಸ್ತುಗಳನ್ನು ಮಹಿಳೆಯರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಖ್ಯಾತ ಮನೋವಿಜ್ಞಾನಿ ಡಾ. ರೇಖಾ ಮನಃಶಾಂತಿ ಅವರು ಮಹಿಳೆಯರು ಮತ್ತು ಮಕ್ಕಳಿಗೆ ಮನಸ್ಸಿನ ಆರೋಗ್ಯ, ದೈನಂದಿನ ಪಾಲನೆ, ಪರಿಸರ ಸ್ವಚ್ಛತೆ ಮತ್ತು ಮಹಿಳಾ ಸಬಲೀಕರಣದ ಕುರಿತು ಅರ್ಥಪೂರ್ಣ ಮಾಹಿತಿ ನೀಡಿದರು.
ಅವರು ಕುಂಕುಮ, ಅರಿಶಿನ ಹಿಂದಿನ ಸಾಂಸ್ಕೃತಿಕ ಹಾಗೂ ಆರೋಗ್ಯಪೂರ್ಣ ಅರ್ಥವನ್ನು ತಲುಪಿಸುವ ಮೂಲಕ ಸಾಂಪ್ರದಾಯಿಕ ವಿಧಿಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಬಿಂಬಿಸಿದರು.
ಮಕ್ಕಳಿಗಾಗಿ ಪಾಠೋಪಕರಣಗಳ ವಿತರಣೆ ಮತ್ತು ವಿವಿಧ ಆಟಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಉಲ್ಲಾಸದಿಂದ ಪಾಲ್ಗೊಂಡರು,ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಮೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ಸಹನಗೌಡ,ಸಮಾಜ ಸೇವಕಿ ಕೋಮಲ್, ಸಮಾಜ ಸೇವಕರಾದ ಚೇತನ್ ಕುಮಾರ್, ಮತ್ತು ಮಾವನ್ ಅಗರಬತ್ತಿಯ ಮಾರ್ಕೆಟಿಂಗ್ ತಂಡದ ಶಿವಕುಮಾರ್, ಜಾಯ್, ವಿಜಯಾ, ರಜಿನಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.