ಪಿ ಜಿ ಆರ್ ಎಸ್ ಎಸ್ ಆಶ್ರಮಕ್ಕೆ ಕೃಷಿ ತಜ್ಞ ಜೋಸೆಫ್ ಲೋಬೊ ಭೇಟಿ

Spread the love

ಮೈಸೂರು: ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಆಶ್ರಮಕ್ಕೆ ಉಡುಪಿ ಜಿಲ್ಲೆಯ ಶಂಕರಪುರ ಗ್ರಾಮದ ಕೃಷಿ ತಜ್ಞರಾದ ಜೋಸೆಫ್ ಲೋಬೊ ಮತ್ತಿತರರು ಭೇಟಿ ನೀಡಿ ತಾಯಂದಿರ ಯೋಗಕ್ಷೇಮ ವಿಚಾರಿಸಿದರು.

ಜೋಸೆಫ್ ಲೋಬೊ ಅವರ ಪತ್ನಿ, ಒಂದು ಹೆಜ್ಜೆ ರಕ್ತದಾನಿ ಬಳಗ ಉಡುಪಿ ಜಿಲ್ಲೆ ಅಧ್ಯಕ್ಷರಾದ ರಕ್ತದಾನಿ ನೀಮಾ ಲೋಬೊ ಹಾಗೂ ಅವರ ಪುತ್ರಿ ದೇನಿಷಾ ಲೋಬೊ ಆಶ್ರಮಕ್ಕೆ ಭೇಟಿಕೊಟ್ಟು ತಾಯಂದಿರನ್ನು ಮಾತನಾಡಿಸಿ, ಅವರಿಗೆ ಬಟ್ಟೆ ಮತ್ತು ಅಕ್ಕಿಯನ್ನು ವಿತರಣೆ ಮಾಡುವ ಮುಖಾಂತರ ಶುಭ ಕೋರಿದರು.

ಪಂಚಾಯಿತಿ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಆಶ್ರಮವಾಸಿಗಳು ಲೋಬೋ ಕುಟುಂಬಕ್ಕೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಸದಾ ಕಾಲ ಇರಲಿ ಎಂದು ಹಾರೈಸಿ, ಧನ್ಯವಾದ ಸಲ್ಲಿಸಿದರು.