ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿಗಳಿಂದ ಮಾವುತ ಮಡದಿಯರಿಗೆ ಬಾಗಿನ

Spread the love

ಮೈಸೂರು: ಅರಮನೆ ಆವರಣದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ, ಕೆಂಪಿಸಿದ್ದನ ಹುಂಡಿ ರವಿಕುಮಾರ್ ನೇತೃತ್ವದಲ್ಲಿ ಮಾವುತರ ಮಡದಿಯರಿಗೆ‌ ಅರಿಶಿಣ ಕುಂಕುಮ ಬಳೆ ಸೀರೆ ನೀಡುವ ಮೂಲಕ ಬಾಗಿನ ಅರ್ಪಿಸಲಾಯಿತು.

ಆನೆ ಮಾವುತರ ಮಡದಿಯರಿಗೆ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ‌ ನಿಕಟಪೂರ್ವ ಸಿಂಡಿಕೇಟ್ ಸದಸ್ಯರ ಜೆಟ್ಟಿಹುಂಡಿ ಡಾ.ಬಸವರಾಜು ಮಾತನಾಡಿ, ಮೈಸೂರು ದಸರಾ ವಿಶ್ವ ವಿಖ್ಯಾತ ಪರಂಪರೆಯನ್ನು ಹೊಂದಿರುವಂತದ್ದು. ಇದು ಮೈಸೂರಿಗೆ ಹಿರಿಮೆ ಜೊತೆಗೆ ಮೈಸೂರು ಶಾಂತಿಯ ಸಂಕೇತ ಇಂತಹ ಸುಂದರ ಅರಮನೆಯ ಒಳಗಡೆ ಆನೆ ಮಾವುತರ ಮಡದಿಯರಿಗೆ ಬಾಗಿನ ನೀಡುವ ಒಂದು ವಿಶಿಷ್ಟ ಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವಂಥದ್ದು ಮನಸ್ಸಿಗೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ಮಾನವೀಯ ಮೌಲ್ಯಗಳು ಮನುಷ್ಯನಿಗೆ ಎಷ್ಟು ಮುಖ್ಯ, ಮನುಷ್ಯ ಸಂಬಂಧಕ್ಕೆ ಅದರದೇ ಆದ ಗೌರವವಿದೆ ಅದಕ್ಕೆ ಪೂರಕವಾಗಿ ಬಾಗಿನವನ್ನು ನೀಡಿರುವುದು ಬಹಳ ವಿಶಿಷ್ಟ ಹಾಗೂ ಎಮ್ಮೆ ವಿಚಾರ ಎಂದು ತಿಳಿಸಿದರು.

ಈ ವೇಳೆ ಮೈಸೂರು ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಶಿವಪ್ಪ ಕೋಟೆ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ವೈ.ಕೆ, ಮೈಸೂರು ಕಾರಾಗೃಹ ಮಂಡಳಿ ಸದಸ್ಯರಾದ ಪವನ್ ಸಿದ್ದರಾಮ, ಕಾಂಗ್ರೆಸ್ ಮುಖಂಡರಾದ ಮಹೇಶ್, ಚೇತನ್ ಹರಪನಹಳ್ಳಿ ಹಾಗೂ ಮಾವುತರ ಕುಟುಂಬದವರು ಹಾಜರಿದ್ದರು.