ಮೈಸೂರು: ಪಿರಂಗಿ ತಾಲೀಮು ಯಶಸ್ಸಿಗಾಗಿ ಸಿಎಆರ್ ಸಿಬ್ಬಂದಿ ಕೋಟೆ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತಾಲೀಮು ಸಮಯದಲ್ಲಿ ಯಾವುದೇ ವಿಘ್ನಗಳು ನಡೆಯಬಾರದೆಂಬ ಕಾರಣಕ್ಕೆ ಮಾರಮ್ಮ ದೇವಿಗೆ ಹಾಲು ಮೊಸರು ಅಭಿಷೇಕ ನೆರವೇರಿಸಿ ಬೇವಿನ ಸೊಪ್ಪು ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರತಿಭಾರಿ ತಾಲೀಮು ಆರಂಭಕ್ಕೆ ಮುನ್ನ ಕೋಟೆ ಮಾರಮ್ಮನಿಗೆ ಪೂಜೆ ಸಲ್ಲಿಸುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಕೋಟೆ ಮಾರಮ್ಮನಿಗೆ ಪೂಜೆ ಅಭಿಷೇಕ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದ ನಂತರ ಕುಂಕುಮ,ಅರಿಶಿನ,ಹೂವು ಹಾಗೂ ಬೇವಿನ ಸೊಪ್ಪಿನ ಪ್ರಸಾದ ತೆಗೆದುಕೊಂಡು ಪಿರಂಗಿ ಗಾಡಿಗಳ ಮೇಲೆ ಇಟ್ಟು ಸಿಎಆರ್ ಸಿಬ್ಬಂದಿಗಳು ಪೂಜೆ ಸಲ್ಲಿಸುವುದು ವಾಡಿಕೆ.
ಶುಕ್ರವಾರ ಕೂಡಾ ತಾಲೀಮು ಪ್ರಾರಂಭಕ್ಕೆ ಮುನ್ನ ಮಾರಮ್ಮ ತಾಯಿಗೆ ಪೂಜೆ ಸಲ್ಲಿಸಿ, ವಸ್ತುಪ್ರದರ್ಶನದ ಆವರಣದಲ್ಲಿ ಗಜಪಡೆಗೆ ಎರಡನೇ ಹಂತದ ತಾಲೀಮು ನಡೆಯಲಿದೆ.