ಯುವ ದಸರಾ ಸೆ. 23ರಿಂದ ಪ್ರಾರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ದಸರಾ ಮಹೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಸೆಪ್ಟಂಬರ್ 23ರಿಂದ ಪ್ರಾರಂಭವಾಗಲಿದೆ.

ಮೈಸೂರು ದಸರಾ ಅಂಗವಾಗಿ ನಡೆಯುವ ಯುವ ದಸರಾ ಉದ್ಘಾಟನೆಯು 23 ರಂದು ಸಂಜೆ 6 ಗಂಟೆಗೆ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಹತ್ತಿರ, ಉತ್ತನಹಳ್ಳಿ, ರಿಂಗ್ ರೋಡ್ ಪಕ್ಕದ ಮೈದಾನದಲ್ಲಿ ನೆರವೇರಲಿದೆ.

ಸೆಪ್ಟಂಬರ್ 23 ರಿಂದ ಸೆ.27ರವರೆಗೆ ಸಂಜೆ 5.30ರಿಂದ ರಾತ್ರಿ 10.30ರವರೆಗೆ ಯುವದಸರಾ ನಡೆಯಲಿದ್ದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಪ್ರತೇಕ 5 ಸಾವಿರ ಮತ್ತು 2.5 ಸಾವಿರ ರೂಪಾಯಿಗಳ ಟಿಕೆಟ್‌ನ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು ಬುಕ್ ಮೈ ಶೋ (Book My Show) ನಲ್ಲಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ನಗರದ ವಿವಿಧ ಕಡೆಗಳಿಂದ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಹಾರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದ್ದಾರೆ.

ಯುವ ದಸರಾ ಕಾರ್ಯಕ್ರಮಗಳ ವಿವರ:
ಸೆಪ್ಟಂಬರ್ 23 ರಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜನಕ ಅರ್ಜುನ್ ಜನ್ಯ ಮತ್ತು ಗಾಯಕರ ತಂಡ, ಲಗೋರಿ ಬ್ಯಾಂಡ್ ಖ್ಯಾತ ಗಾಯಕರ ತಂಡ
ಸೆಪ್ಟಂಬರ್ 24 ರಂದು ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಹಾಗೂ ಸಂಯೋಜಕರು ಮತ್ತು ಗಾಯಕರು ಪ್ರೀತಮ್ ಮತ್ತು ಶೋರ್ ಪೊಲೀಸ್ (ಖ್ಯಾತ ಗಾಯಕರ ತಂಡ)
ಸೆಪ್ಟಂಬರ್ 25 ರಂದು ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕ ಜುಬಿನ್ ನೌಟಿಯಲ್ ಹಾಗೂ ಖ್ಯಾತ ಗಾಯಕ ಶ್ರೀರಾಮಚಂದ್ರರಿಂದ ಕಾರ್ಯಕ್ರಮ.
ಸೆಪ್ಟಂಬರ್ 26 ರಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜಕರು ಮತ್ತು ಗಾಯಕರು ದೇವಿಶ್ರೀ ಪ್ರಸಾದ್ ಮತ್ತು ಆಸೀಸ್ ಕೌರ್ ಖ್ಯಾತ ಗಾಯಕರಿಂದ ಕಾರ್ಯಕ್ರಮ.
ಸೆಪ್ಟಂಬರ್ 27 ರಂದು ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕರು ಸುನಿಧಿ ಚೌಹಾಣ್ ಮತ್ತು ಬೆಸ್ಟ್ ಕಪ್ಟ್ ಸಿಕ್ರೇಟ್ ಖ್ಯಾತ ಗಾಯಕರ ತಂಡದಿಂದ ಕಾರ್ಯಕ್ರಮ ಇರಲಿದೆ