ಮೋದಿ ಹುಟ್ಟು ಹಬ್ಬ:ನಿವೃತ ಸೈನಿಕರಿಗೆ ಪ್ರತಾಪ್ ಸಿಂಹ ಸತ್ಕಾರ

Spread the love

ಮೈಸೂರು: ಹೆಮ್ಮೆಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನುಮದಿನದ ಪ್ರಯುಕ್ತ ಖಾಸಗಿ ಹೋಟೆಲ್ ನಲ್ಲಿ ಪ್ರತಾಪ್ ಸಿಂಹ ಅಭಿಮಾನಿ ಬಳಗ ಚಾಮರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ 75 ನಿವೃತ್ತ ಸೈನಿಕರಿಗೆ
ಸನ್ಮಾನಿಸಿ ಸತ್ಕರಿಸಲಾಯಿತು.

ಈ‌ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು,ಜನತೆ
ನಿರ್ಭಯರಾಗಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು ಎಂದು ಬಣ್ಣಿಸಿದರು

ಯೋಧರು ಗಡಿ ಕಾಯದೆ ಹೋದರೆ, ಉಗ್ರರು ಶತ್ರುಗಳ ಹಾವಳಿಗೆ ನಾವೆಲ್ಲರೂ ಪ್ರಾಣ ರಕ್ಷಣೆ ಮಾಡಿಕೊಳ್ಳುವುದಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು.

ನಮ್ಮ ದೇಶದ ಸೈನಿಕರು ಗಡಿಯಲ್ಲಿ ನಿದ್ದೆ ಬಿಟ್ಟು ನಮ್ಮ ದೇಶವನ್ನು ಕಾಪಾಡುತ್ತಿರುವರಿಂದಲೇ ನಾವಿಂದು ನೆಮ್ಮದಿಯಿಂದ ಕಣ್ಣು ಮುಚ್ಚಿ ನಿದ್ರಿಸಲು ಸಾಧ್ಯವಾಗಿದೆ ಎಂಬುದು ಸತ್ಯ.

ದೇಶದ ರಕ್ಷಣೆಯ ವಿಚಾರ ಬಂದಾಗ ಆದಷ್ಟು ವೀರ ಯೋಧರ ತ್ಯಾಗ ಬಲಿದಾನಗಳನ್ನು ಕಣ್ಣಮುಂದೆ ಹಾದು ಹೋಗುತ್ತವೆ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶದ, ದೇಶವಾಸಿಗಳ ರಕ್ಷಣೆಗೆ ಮಹಾ ತ್ಯಾಗಳನ್ನು ಮಾಡಿದವರು ಯೋಧರು, ತಮ್ಮ ಕುಟುಂಬ ತಮ್ಮ ಬದುಕನ್ನು, ಒಟ್ಟಾರೆ ತಮ್ಮ ಎಲ್ಲಾ ವೈಯಕ್ತಿಕತೆ ಗಳನ್ನು ಬದಿಗಿರಿಸಿ ದೇಶದ ರಕ್ಷಣೆಯೇ ನಮ್ಮ ಆದ್ಯತೆ ಎಂಬುದಾಗಿ ತಿಳಿದು, ಬಿಸಿಲು, ಚಳಿ ,ಗಾಳಿ, ಮಳೆ ಎನ್ನದೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡವರು ನಮ್ಮ ಹೆಮ್ಮೆಯ ಸೈನಿಕರು ಹೀಗಾಗಿ ಅವರನ್ನು ಗೌರವಿಸುವ ಕಾರ್ಯವಾಗಬೇಕೆಂದು ಪ್ರತಾಪ್ ಸಿಂಹ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ. ಸತೀಶ್,ಗಿರೀಶ್ ಪ್ರಸಾದ್, ಬೊ.ಉಮೇಶ, ಸುಬ್ಬಯ್ಯ ಬಿಜೆಪಿ ಮುಖಂಡರಾದ ಎಸ್. ಕೆ ದಿನೇಶ್, ದಿನೇಶ್ ಗೌಡ, ರಾ. ಪರಮೇಶಗೌಡ,ಚೇತನ್ ಗೌಡ, ಗುರು ವಿನಾಯಕ್, ಭೈರಪ್ಪ,ಕೇಬಲ್ ವೆಂಕಟೇಶ್, ಪ್ರಮೋದ್, ಸುರೇಂದ್ರ, ಶ್ರವಣ್ ಮಾಲಿ, ವಿನೋದ್, ಸಂದೇಶ್, ಜಗದೀಶ್,ವಸಂತ ಮನೀಶ್ ಕಲ್ಕೆರೆ ನಾಗರಾಜ್,ಗಂಗಣ್ಣ, ಕಿರಣ್, ಚಂದ್ರಕಲಾ, ಪ್ರಕಾಶ್, ನಿಖಿಲ್, ಜಯಪ್ಪ, ಗುರುವಿನಾಯಕ್,ಮಹೇಶ್, ರಾಜೇಶ್, ಪ್ರಜ್ವಲ್, ಅಶೋಕ್, ಜಯಣ್ಣ,ಮಧು, ಚರಣ್ ಮತ್ತಿತರರು ಉಪಸ್ಥಿತರಿದ್ದರು.