ಮೈಸೂರು: ಮೈಸೂರಿನ ರಾಮಕೃಷ್ಣ ನಗರದ ‘ಜಿ’ಬ್ಲಾಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನುಮ ದಿನವನ್ನು ತಾಯಿ ಸ್ವರೂಪದ ಮಾತೆಯರಿಗೆ ಗೌರವ ಸಮರ್ಪಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ನಂ ಶ್ರೀ ಕಂಠಕುಮಾರ್ ಹಾಗೂ ಮಾಜಿ ಕಾರ್ಪೊರೇಟರ್ ಎಂ. ಕೆ ಶಂಕರ್ ಮೋದಿ ಅವರ ಕುರಿತು ಮಾತನಾಡಿ,ಪ್ರಧಾನಿ ಮೋದಿ ಅವರ ಆದರ್ಶಗಳನ್ನು ನಾವೆಲ್ಲ ಪಾಲಿಸಬೇಕು ಎಂದು ಹೇಳಿದರು.
ಮೋದಿ ಅಭಿಮಾನಿ ಬಳಗದ ಎನ್ ಗಂಗಾಧರ್, ಎನ್ ಶ್ರೀನಿವಾಸ್ ಪ್ರಸಾದ್, ಚನ್ನಪ್ಪ,ಮಹೇಶ್, ಕೃಷ್ಣಪ್ಪ, ಕೆಂಪೇಗೌಡ, ಹರ್ಷ, ಪೂರ್ಣಿಮಾ,ಸುಕುಮಾರ್, ಶಶಿಧರ್ ಸೇರಿದಂತೆ ಅನೇಕ ಸದಸ್ಯರು ಹಾಜರಿದ್ದರು.