ಸೆ18 ರಂದು‌ ವಿಷ್ಣು ಜನುಮದಿನ:ಹೋಳಿಗೆ ಊಟ,ರಸಮಂಜರಿ

Spread the love

ಮೈಸೂರು: ಸೆ18 ರಂದು ಕರ್ನಾಟಕ ರತ್ನ ಸಾಹಸಸಿಂಹ ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಹೋಳಿಗೆ ಊಟ ಹಮ್ಮಿಕೊಳ್ಳಲಾಗಿದೆ.

ಪತ್ರಕರ್ತರ ಭವನದಲ್ಲಿ ಮೈಸೂರು ರತ್ನ ಡಾಕ್ಟರ ವಿಷ್ಣುವರ್ಧನ್ ಸ್ಮಾರಕ ಅಭಿಮಾನಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ‌ ಸಂಘದ ಗೌರವಾಧ್ಯಕ್ಷ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಈ ವಿಷಯ ತಿಳಿಸಿದರು.

ಸೆ. 18ರಂದು ಬೆಳಗ್ಗೆ 10 ಗಂಟೆಗೆ ಊದ್ಬೂರು ಗೇಟ್ ಬಳಿ ಇರುವ ಡಾಕ್ಟರ್ ವಿಷ್ಣುವರ್ಧನ್ ಸ್ಮಾರಕದಲ್ಲಿ
ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ ಮತ್ತು ಕೀರ್ತಿ ಅನಿರುದ್ಧ ಮತ್ತು ಕುಟುಂಬ ವರ್ಗ ವಿಷ್ಣು ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ನಂತರ 11 ಗಂಟೆಗೆ ಅಭಿಮಾನಿಗಳು ವಿಷ್ಣು ಗ್ರೂಪ್ ತಂಡದಿಂದ ವಿಷ್ಣುವರ್ಧನ್ ನಟಿಸಿರುವ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ12 ಗಂಟೆಗೆ 5000 ಅಭಿಮಾನಿಗಳಿಗೆ ಬಾಳೆ ಎಲೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ ಟಿ ದೇವೇಗೌಡ,ಟಿ ಎಸ್ ಶ್ರೀವತ್ಸ, ಹರೀಶ್ ಗೌಡ, ಮಾಜಿ ಶಾಸಕ ಎಂ ಕೆ ಸೋಮಶೇಖರ್, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್ ಮತ್ತಿತರ ಮುಖಂಡರುಗಳು ಭಾಗವಹಿಸಲಿದ್ದಾರೆ.

ಕಲಾ ರಸಿಕರು, ಕಲಾ ಪ್ರೇಮಿಗಳು, ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂ ಡಿ ಪಾರ್ಥಸಾರಥಿ ಮನವಿ ಮಾಡಿದರು

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಟಿ ವಿ ಸುರೇಶ್, ಅಧ್ಯಕ್ಷರು ಸಿದ್ದಪ್ಪ, ಉಪಾಧ್ಯಕ್ಷರಾದ ಸಂತೋಷ್ ಪಾನಿಪುರಿ, ಖಜಾಂಜಿ ರಾಜು ಎಸ್ ಆರ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್ ರಾಜೇಶ್
ಮತ್ತಿತರರು ಉಪಸ್ಥಿತರಿದ್ದರು.