ಭಾರತ ರತ್ನ ಎಂ.ಎಸ್. ಸುಬ್ಬಲಕ್ಷ್ಮಿ ಅವರ‌ ಸ್ಮರಣೆ

Spread the love

ಮೈಸೂರು: ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ ಹಾಗೂ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ್ತಿ ಎಂ. ಎಸ್.ಸುಬ್ಬಲಕ್ಷ್ಮಿ ಅವರ ಜಯಂತಿಯನ್ನು
ಮೈಸೂರಿನಲ್ಲಿ ವಿಶೇಷವಾಗಿ ಆಚರಿಸಲಾಯಿತು.

ನಗರದ ಎಂ.ಜಿ. ರಸ್ತೆಯಲ್ಲಿರುವ ಜೆ.ಎಸ್.ಎಸ್. ಸಂಸ್ಥೆ ಸಾಹುಕಾರ್ ಸಿದ್ದಲಿಂಗಯ್ಯ ನವರ ವೇದಶಾಸ್ತ್ರ ಜ್ಯೋತಿಷ್ಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಲೇಖನಿ, ಹಣ್ಣು ಹಂಪಲು ವಿತರಿಸುವ ಮೂಲಕ ಎಂ. ಎಸ್.ಸುಬ್ಬಲಕ್ಷ್ಮಿ ಅವರ ಜಯಂತಿಯನ್ನು
ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಪಸರಿಸಿ ಸಂಗೀತಕ್ಕೆ ಒಂದು ಆಧ್ಯಾತ್ಮಿಕ ರೂಪ ನೀಡಿದ ಎಂ ಎಸ್ ಸುಬ್ಬಲಕ್ಷ್ಮಿ ಅವರು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಭಾರತ ರತ್ನ, ರಾಮನ್ ಮ್ಯಾಗ್ನೆಸ್ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,ಸಂಗೀತ ಕಲಾ ನಿಧಿ, ಸಂಗೀತ ಕಲಾಷಿಕಾ ಮಣಿ,ಕಾಳಿದಾಸ ಸಮ್ಮಾನ್, ಇಂದಿರಾ ಗಾಂಧಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಜೀವನದುದ್ದಕ್ಕೂ ಪಡೆದಿದ್ದರು.

ಇಂತಹ ಮಹಾನ್ ಸಂಗೀತಗಾರ್ತಿಯ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಅರಿಯಬೇಕು ಎಂದು ಪ್ರಕಾಶ್ ಪ್ರಿಯದರ್ಶನ್ ಸಲಹೆ ನೀಡಿದರು.

ಈ ರೀತಿ ಸಾಧನೆ ಮಾಡಿದ ಹಲವಾರು ಮಹನೀಯರಿದ್ದು ವಿದ್ಯಾಭ್ಯಾಸದ ಜೊತೆಗೆ ಈ ರೀತಿಯ ಸಾಧನೆ ಮಾಡಿದವರ ಜೀವನ ಚರಿತ್ರೆಯನ್ನು ತಿಳಿದು ಅವರಲ್ಲಿ ನೀವು ಒಬ್ಬರು ಆಗಬೇಕೆಂದು ತಿಳಿ ಹೇಳಿದರು.

ಈ ವೇಳೆ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ನಿಲಯ ಪಾಲಕರುಗಳಾದ ಮಹೇಶ್, ಮೋಹನ್, ಮುದ್ದಪ್ಪ, ಬಿ.ಜೆ.ಪಿ. ಮುಖಂಡ ಪುರುಷೋತ್ತಮ್,ಗಾಯಕ ಯಶವಂತ್ ಕುಮಾರ್, ಛಾಯಾ, ಸುಬ್ರಮಣಿ,ಮಹೇಶ್, ರಾಜೇಶ್ ಕುಮಾರ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್ ಮತ್ತಿತರರು ಹಾಜರಿದ್ದರು.