ಗಾಡಿ ಚೌಕದಲ್ಲಿ ದರ್ಗಾ ನಿರ್ಮಾಣ ವಿವಾದ: ಪಾಲಿಕೆ ಆಯುಕ್ತರ ಪಾತ್ರ‌ ಇಲ್ಲ-ತೇಜಸ್ವಿ

ಮೈಸೂರು: ಮೈಸೂರಿನ ಕೆ ಆರ್ ಮೊಹಲ್ಲಾ ಗಾಡಿ ಚೌಕದಲ್ಲಿ ದರ್ಗಾ ನಿರ್ಮಾಣ ವಿವಾದದಲ್ಲಿ ನಗರಪಾಲಿಕೆ ಆಯುಕ್ತರ ಪಾತ್ರ ಇಲ್ಲ,ಆದರೂ ಕೆಲವರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.

ಗಾಡಿಚೌಕದ ಸ್ವತ್ತಿನ ಸಂಖ್ಯೆ 2192 ಕೆ -65 ರಲ್ಲಿ ಧಾರ್ಮಿಕ ಕಟ್ಟಡ (ಪದರ್ಗಾ) ನಿರ್ಮಿಸಲು ಕಾರ್ಯದರ್ಶಿ ದಿಲ್ ಬರ್ ಷಾವಲಿ ಮಕಾನ್ (ಸುನ್ನಿ ದರ್ಗಾ) ಅವರು ಅನುಮತಿ ಕೋರಿ ಮೈಸೂರು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯು ಈ ಕುರಿತು ತಕರಾರು ಅರ್ಜಿ ಸಲ್ಲಿಸುವಂತೆ ಸಾರ್ವಜನಿಕ ಪ್ರಕಟಣೆ ಯನ್ನು ಹೊರಡಿಸಿದೆ.

ಇವೆಲ್ಲ ಕಾನೂನಿನ ಪ್ರಕಾರವೇ ನಡೆದಿರುತ್ತದೆ ಆದರೆ ಈಗ ಕೆಲವರು ಮೈಸೂರು ಪಾಲಿಕೆ ಆಯುಕ್ತರಾದ ಶೇಕ್ ತನ್ವೀರ್ ಆಫಿಸ್ ಅವರ ಪಾತ್ರ ವಿದೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ದೂರಿದ್ದಾರೆ.

ಶೇಖ್ ತನ್ವೀರ್ ಆಫಿಸ್ ಅವರು ಒಬ್ಬ ನಿಷ್ಠಾವಂತ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ,ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದ ಇಲ್ಲಿಯ ವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಈಗ ಅವರು ಮುಸ್ಲಿಂ ಎಂಬ ಕಾರಣಕ್ಕೆ ವಿನಾಕಾರಣ ಅವರ ಮೇಲೆ ಕೆಲವರು ಆರೋಪಿಸುತ್ತಿದ್ದಾರೆ ಇದು ಸರಿಯಲ್ಲ ಇದು ಖಂಡನೀಯ ಎಂದು ತಿಳಿಸಿದ್ದಾರೆ.

ಶೇಕ್ ತನ್ವೀರ್ ಆಫಿಸ್ ಅವರು ಕಾನೂನಿನಲ್ಲಿ ಇರುವ ನಿಯಮಾನುಸಾರ ಈ ವಿಷಯದಲ್ಲಿ ನಡೆದುಕೊಂಡು ಯಾರಿಗಾದರೂ ತಕರಾರು ಇದ್ದಲ್ಲಿ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕ ಪ್ರಕಟಣೆ ಯನ್ನು ಹೊರಡಿಸಿದ್ದಾರೆ.

ಈಗಾಗಲೇ ಹಲವರು ತಕಾರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಇದು ಸಾಮಾನ್ಯ ಪ್ರಕ್ರಿಯೆ, ಇದನ್ನು ವಿನಾಕಾರಣ ಕೆಲವರು ಗೊಂದಲ ಉಂಟುಮಾಡಿ ಆಯುಕ್ತರಾದ ಶೇಕ್ ತನ್ವೀರ್ ಆಫಿಸ್ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

ಒಂದು ವೇಳೆ ಇದೇ ರೀತಿ ದಕ್ಷ ಅಧಿಕಾರಿಯ ಮೇಲೆ ಸುಳ್ಳು ಆರೋಪಗಳನ್ನು ಮುಂದುವರೆಸಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ತೇಜಸ್ವಿ ಎಚ್ಚರಿಸಿದ್ದಾರೆ.