ಮೈಸೂರು: ಮಾನಸ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಯುವ ಸಂಭ್ರಮ ಅತಿ ಹೆಚ್ಚು ಕಳೆಗಟ್ಟಿದ್ದು ಶಿವ ತಾಂಡವ ನೃತ್ಯಕ್ಕೆ ಮನಸೋತ ಯುವ ಜನತೆ ಕುಣಿದು ಕುಪ್ಪಳಿಸಿ,ಶಿಳ್ಳೆ, ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು.
ಮೈಸೂರು ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಾಹಿತ್ಯ ಪ್ರಾಕಾರಗಳು, ಕೊಳ್ಳೇಗಾಲ ವಿದ್ಯಾನಗರ ಜೆ.ಎಸ್.ಎಸ್ ಶುಶ್ರೂಷ್ ಶಾಲೆ ಜಾನಪದ, ಮೈಸೂರು ಸರಸ್ವತಿ ಪುರಂ ಜೆ ಎಸ್ ಎಸ್ ಮಹಿಳಾ ಐ ಟಿಐ ಡಿ ಎಲ್ ಡಿ ಕಾಲೇಜಿನ ವಿದ್ಯಾರ್ಥಿಗಳು ಶಿವತಾಂಡವ ನೃತ್ಯಕ್ಕೆ ಮನಸೋತ ಯುವಕರು ಸಂಭ್ರಮಪಟ್ಟರು.
ಬಯಲುರಂಗಮಂದಿರದಲ್ಲಿ ನಾಲ್ಕನೇ ದಿನ ಶಿಕ್ಷಣ ವಸ್ತು ವಿಷಯ, ತಂದೆ ತಾಯಿ ಪಾಲನೆ ಪೋಷಣೆಯಲ್ಲಿ ಮಕ್ಕಳ ಪಾತ್ರ, ಸಂಭ್ರಮವನ್ನು ತೆರೆದಿಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ಮಾಡಿದರು.
53 ನೃತ್ಯ ಪ್ರದರ್ಶನಗಳನ್ನು ಮಾಡಲಾಯಿತು. ದೇಶಭಕ್ತಿ ಸ್ವಾತಂತ್ರ್ಯ ಚಳವಳಿ, ಯುವಜನತೆಯ ರೈತರು ಮತ್ತು ಯೋಧರು, ಆದಿಶಕ್ತಿ, ವೀರವನತಿಯರು, ಮತದಾನ ಮತ್ತು ಪ್ರಜಾಪ್ರಭುತ್ವ, ಕನ್ನಡ ಸಂಸ್ಕೃತಿ, ಭಾರತೀಯ ಸೈನ್ಯದಲ್ಲಿ ಮಹಿಳಾಯೋಧರು ಹೀಗೆ ಮಂಡ್ಯ, ಮೈಸೂರು, ವಿಜಯಪುರ, ಮದ್ದೂರು, ಬೆಂಗಳೂರು, ಹುಣಸೂರು ನಾನಾ ಕಡೆಯ ಕಾಲೇಜಿನ ವಿದ್ಯಾರ್ಥಿಗಳು ಗೀತೆಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.