ಚಾಮರಾಜನಗರ: ಚಾ.ನಗರ ಹಾಗೂ ಯಳಂದೂರು ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಿ,17 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ ಡಾ.ಬಿ.ಟಿ.ಕವಿತಾ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಾ.ನಗರ ಪಟ್ಟಣ ಪೊಲೀಸ್ ಠಾಣೆ ಹಾಗೂ ಯಳಂದೂರು ಪಟ್ಟಣದಲ್ಲಿ ದಾಖಲಾಗಿದ್ದ 6 ಪ್ರಕರಣಗಳ ಸಂಬಂಧ ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಆರೋಪಿಗಳಿಂದ 10 ಬೈಕ್‌ಗಳು, 2 ಕಾರುಗಳು ಹಾಗೂ 70 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚಾ.ನಗರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 5 ಕಳ್ಳತನ ಪ್ರಕರಣ ಸಂಬಂಧ 70 ಗ್ರಾಂ ಚಿನ್ನಾಭರಣ, 2 ಕಾರುಗಳು, 2 ಬೈಕ್‌ಗಳು, 1.50 ಲಕ್ಷ ರೂಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಚಾ.ನಗರದ ಇಲಿಯಾಜ್‌ನಗರದ ಅರ್ಫಾಜ್ ಖಾನ್, ಮೈಸೂರು ಕೆ.ಜಿ.ಕೊಪ್ಪಲಿನ ಲೀಲಾ, ಚಾ.ನಗರ ತಾಲೂಕಿನ ಚಂದಕವಾಡಿ ಗ್ರಾಮದ ರಾಚಪ್ಪಾಜಿ, ತಮಿಳುನಾಡಿನ ವಿನೋದ್, ಯಳಂದೂರು ಪಟ್ಟಣದ ಹರೀಶ್ ಬಂಧಿತ ಆರೋಪಿಗಳು.
ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್‌ಗಳ ಕಳ್ಳತನ ಸಂಬಂಧ ಬನ್ನೂರು ಹೋಬಳಿಯ ಬಿ.ಬೆಟ್ಟಹಳ್ಳಿಯ ಮದನ್, ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯ ಅರ್ಜುನ, ಆಲಗೂಡಿನ ಪ್ರವೀಣ, ಎಡತಲೆಯ ಕಾರ್ತಿಕ್ ಎಂಬು ವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಶಿಧರ್, ಡಿವೈಎಸ್ಪಿಗಳಾದ ಲಕ್ಷ್ಮಯ್ಯ, ಧರ್ಮೇಂದರ್ ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಕಾಂತ್, ಸೆನ್ ಠಾಣೆಯ ಇನ್ಸ್‌ಪೆಕ್ಟರ್ ಸಾಗರ್ ಉಪಸ್ಥಿತರಿದ್ದರು.