ಸೆ.23, ಕಾವೇರಿ ಕ್ರಿಯಾ ಸಮಿತಿ ನೇತೃತ್ವದಲ್ಲಿಧರ್ಮಸ್ಥಳ ಚಲೋ

Spread the love

ಮೈಸೂರು: ಧರ್ಮಸ್ಥಳ ಉಳಿವಿಗೆ ಹಾಗೂ ಧರ್ಮಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸೆಪ್ಟೆಂಬರ್ 23ರಂದು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ ಈ ವಿಷಯ ತಿಳಿಸಿದರು.

ಈ ಕುರಿತು ಕಾವೇರಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು ಸೆಪ್ಟೆಂಬರ್ 23ರಂದು ಬೆಳಗ್ಗೆ 5 ಗಂಟೆಗೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಎಲ್ಲಾ ಸಂಘ-ಸಂಸ್ಥೆಗಳ ಮುಖ್ಯಸ್ಥರು ಧರ್ಮಸ್ಥಳಕ್ಕೆ ಹೊರಡಲಿದ್ದಾರೆ ಎಂದು ತಿಳಿಸಿದರು.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ಹೋರಾಟಗಾರರು ಸಂಘ ಸಂಸ್ಥೆಗಳವರು ತಮ್ಮ ಹೆಸರುಗಳನ್ನು ಅಶೋಕ್ ಸುಬ್ಬಣ್ಣ ಮೊಬೈಲ್ ನಂಬರ್ 9880853893 ನಂಬರ್ ನಲ್ಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತೇಜೇಶ್ ಲೋಕೇಶ್ ಗೌಡ ವಿನಂತಿಸಿದರು

ಸುದ್ದಿಗೋಷ್ಠಿಯಲ್ಲಿ ಪ್ರದೀಪ್, ಬೋಗಾದಿ ಸಿದ್ದೇಗೌಡ, ಪುಷ್ಪ, ವಿಜಯ,ಸಿ.ಹೆಚ್.ಕೃಷ್ಣಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.