ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ ಅವರಿಗೆ ಸನ್ಮಾನ

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕದ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಿರುವ ಗಣ್ಯರನ್ನು ಸನ್ಮಾನಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ.

ಚಾಮುಂಡೇಶ್ವರಿ ನಗರ ಮಂಡಲದಿಂದ ಸ್ವಾತಂತ್ರ್ಯ ಹೋರಾಟಗಾರರಾದ ವೈ.ಸಿ. ರೇವಣ್ಣರವರ ಮನೆಗೆ ಭೇಟಿ ನೀಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ವೇಳೆ ರೇವಣ್ಣ ಅವರು ಹೋರಾಟ ಹಾಗೂ ಬಂಧನದ ದಿನಗಳನ್ನು ಮೆಲುಕು ಹಾಕಿದರು.

ಜೊತೆಗೆ ಬ್ರಿಟಿಷ್ ಆಡಳಿತ, ರಾಜರಾಡಳಿತ ಹಾಗೂ ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳ ಕಾರ್ಯಗಳನ್ನು ಮೆಲುಕು ಹಾಕಿ, ಹಿಂದೆ ಕನ್ನಂಬಾಡಿ ಆಣೆಕಟ್ಟು ಕಟ್ಟಲು ಮುಂಬೈನಲ್ಲಿ ಅರಮನೆಯ ಚಿನ್ನವನ್ನು ಮಾರಾಟ ಮಾಡಲಾಗಿತ್ತು, ಈಗ ಅಭಿವೃದ್ಧಿ ಅನ್ನುವುದರ ವ್ಯಾಖ್ಯಾನವನ್ನೇ ಬದಲಾಯಿಸಿದ್ದಾರೆ ಎಂದು ವಿಷಾದಿಸಿದರು.

ಯುವ ಪೀಳಿಗೆಗೆ ಹೆಚ್ಚು ಸೇವಾ ಮನೋಭಾವ ತುಂಬಬೇಕಿದೆ ಎಂದು ವೈ.ಸಿ. ರೇವಣ್ಣ ತಿಳಿಹೇಳಿದರು‌

ಈ ವೇಳೆ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್

ಭಟ್, ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಹೆಚ್.ಜಿ. ರಾಜಮಣಿ, ಬಿ.ಸಿ. ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ಕಾರ್ಯದರ್ಶಿಗಳಾದ ವಿನುತಾ, ಕಲಾವತಿ ತುಳಸಿ, ಯುವ ಮೋರ್ಚಾ ಅಧ್ಯಕ್ಷ ಮಧು ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಚಂದನ್ ಗೌಡ, ಸಾಗರ್ ಸಿಂಗ್, ಶಿವು, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶುಭಶ್ರೀ ಹಾಜರಿದ್ದರು.