ಸಮೃದ್ಧಿ ಟ್ರಸ್ಟ್ ನಿಂದ ಮಾವುತರ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ

Spread the love

ಮೈಸೂರು: ಸಮೃದ್ಧಿ ಟ್ರಸ್ಟ್ ವತಿಯಿಂದ ಮಾವುತರ ಮಕ್ಕಳಿಗಾಗಿ ವಿಶಿಷ್ಟ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಜೀವನ ನಿರ್ವಹಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರನ್ನು ಸಾಮಾಜಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಮನೋವಿಜ್ಞಾನಿ ಡಾ.ರೇಖಾ ಮನಃಶಾಂತಿ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಜೀವನ ಕೌಶಲ್ಯಗಳ ಮಹತ್ವವನ್ನು ವಿವರಿಸಿ, ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಆಟಗಳ ಮೂಲಕ ಆಸಕ್ತಿದಾಯಕ ತರಬೇತಿಯನ್ನು ನೀಡಿದರು.

ಜೀವನವನ್ನು ಹೇಗೆ ನಡಿಸಬೇಕು, ಭಾವನಾತ್ಮಕ ಸಮತೋಲನ ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಅವರು ಪ್ರಾಯೋಗಿಕವಾಗಿ ಬೋಧನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.ಈ ವೇಳೆ
ಸುಮಾರು 50 ಮಕ್ಕಳಿಗೆ ಅಧ್ಯಯನ ಸಾಮಗ್ರಿಗಳನ್ನು (ಸ್ಟೇಷನರಿ ಕಿಟ್) ವಿತರಿಸಲಾಯಿತು.

ಜೊತೆಗೆ ಮಾವುತರು ಮತ್ತು ಕವಾಡಿಗರಿಗೆ ಹೊದಿಕೆಗಳನ್ನೂ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಮೃದ್ಧಿ ಟ್ರಸ್ಟ್ ಅಧ್ಯಕ್ಷೆ ಸಹನಾಗೌಡ,ಯೋಗ ತಜ್ಞೆ ಡಾ. ಸೌಮ್ಯಾ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಸ್ಥಾಪಕರಾದ ವಿಕ್ರಮ್ ಆಯಂಗಾರ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ, ಶ್ರೀರಂಗ, ಅನಿಲ್ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.