ಮೈಸೂರ: ಚಾಮರಾಜನಗರ ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು ಹೆಚ್ಚಿನ ಸಿಎಸ್‌ಆರ್ ನಿಧಿ ನೀಡುವ ಮೂಲಕ ಸಹಕರಿ ಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮನವಿ ಮಾಡಿದರು.
ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್-3181 ಮತ್ತು ಕ್ರೆಡಾಯ್ ಮೈಸೂರು ವತಿಯಿಂದ ಖಾಸಗಿ ಹೋಟೆ ಲ್ ನಲ್ಲಿ ಆಯೋಜಿಸಿದ್ದ ‘ದಿ ಸಿಎಸ್‌ಆರ್ ಕಾನ್‌ಕ್ಲೇವ್-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆ ಬೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆಯಾಗಿದೆ, ಅನೇಕ ರೀತಿ ಯ ಸಮಸ್ಯೆಗಳಿವೆ. ತುರ್ತಾಗಿ ಜಿಲ್ಲೆಯ 275 ಕೆರೆಗಳ ಅಭಿವೃದ್ಧಿ ಆಗಬೇಕಿದೆ. ಅಂಗನವಾಡಿ, ಶಾಲಾ ಶೌಚ ಗೃಹ, ಕೌಶಲ್ಯ ಅಭಿವೃದ್ಧಿ, ಅರಣ್ಯ ವ್ಯಾಪ್ತಿಯಲ್ಲಿ ಬಫರ್ ಜೋನ್ ಅಭಿವೃದ್ಧಿ ಆಗಬೇಕಿದೆ. ಇದೆಲ್ಲದಕ್ಕೂ ಖಾಸಗಿ ಸಂಸ್ಥೆಗಳ ನೆರವು ಅಗತ್ಯ ಎಂದು ತಿಳಿಸಿದರು.
ಆದಿವಾಸಿಗಳು ವಾಸಿಸುವ ಮನೆಗಳು ಅತ್ಯಂತ ಶೋಚನೀಯವಾಗಿವೆ. ಗುಡ್ಡಗಾಡಿನ ಗ್ರಾಮಗಳಿಗೆ ಭೇಟಿ ನೀಡಿದರೆ ಕನಿಷ್ಠ ಮಳೆ- ಗಾಳಿಯಿಂದ ತಪ್ಪಿಸಿಕೊಳ್ಳಲು ಟಾರ್ಪಲ್ ಕೊಡಿಸಿ ಎಂದು ಜನ ಕೇಳುತ್ತಾರೆ. ಜಿಲ್ಲಾಡಳಿತ ಕೇವಲ 5 ಲಕ್ಷ ರೂ. ವೆಚ್ಚದಲ್ಲಿ ಮಾದರಿ ಮನೆ ನಿರ್ಮಿಸಿದ್ದು, ತುಂಬಾ ಅಗತ್ಯ ಇರುವ 533 ಕುಟುಂಬಗಳಿಗೆ ಸೂರು ಕಲ್ಪಿಸಬೇಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 18 ಏಕ ಶಿಕ್ಷಕ ಶಾಲೆಗಳಿದ್ದು, ಅವು ಗಳಿಗೆ ವಾಹನ ಸೌಕರ್ಯ ಕಲ್ಪಿಸಬೇಕೆಂದು ಕೋರಿದರು.
ಕ್ರೆಡಾಯ್ ಮೈಸೂರು ಚೇರ್ಮೇನ್ ಶ್ರೀಹರಿ ದ್ವಾರಕನಾಥ್ ಮಾತನಾಡಿ, ನಮ್ಮಲ್ಲಿ 500ಕ್ಕೂ ಹೆಚ್ಚು ರಿಯ ಲ್ ಎಸ್ಟೇಟ್ ಉದ್ಯ ಮಿಗಳಿದ್ದಾರೆ. ಕ್ರೆಡಾಯ್ ದೇಶಾದ್ಯಂತ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಸಿ ಎಸ್ ಆರ್ ನಿಧಿಯ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರಿನ ಮುಖ್ಯಸ್ಥೆ ಡಾ.ಪುಷ್ಪಲತಾ ಮಾತನಾಡಿ ನಮ್ಮ ಸಂಸ್ಥೆ ಯಲ್ಲಿ ನೂರಾರು ಮಂದಿ ಶ್ರವಣ ಸಮಸ್ಯೆ ಇರುವವರು ಮನವಿ ಮಾಡಿದ್ದಾರೆ.ದಾನಿಗಳು ಆರ್ಥಿಕ ನೆರವು ನೀಡಬೇಕೆಂದು ಕೋರಿದರು.
ಸಿ.ಎಸ್.ಆರ್ ನಿಧಿ ಬಳಕೆ ಹೇಗೆ ಎಂಬ
ಸಂವಾದದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸೇವಾ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಿ.ಎಸ್.ಆರ್ ಅನುದಾನದ ಬಗ್ಗೆ ರೋಟರಿ ಜಿಲ್ಲಾ ಮಾಜಿ ಗೌರ್ನರ್ ಕೇಶವ್ ಮಾತನಾಡಿ ದಾನಿಗಳು ಸೇವಾ ಸಂಸ್ಥೆ ಯಿಂದ ಅಗತ್ಯವಾಗಿ ಬೇಕಾಗಿರುವ ಸೇವೆಯ ಬಳಕೆ ಮತ್ತು ಕಾರ್ಯಗತ ಮಾಡುವ ಬಗ್ಗೆ ಚರ್ಚಿಸಿದರು.
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಮಹಾ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋಟ್, ರೋಟರಿ ಫೌಂಡೇಷನ್ ಇಂಡಿಯಾದ ಸಿಎಸ್‌ಆರ್ ವಿಭಾಗದ ಮುಖ್ಯಸ್ಥೆ ಭಾವನಾ ವರ್ಮಾ, ಸಿಐಐ ಮೈಸೂರು ಅಧ್ಯಕ್ಷ ನಾಗರಾಜ್ ಗರ್ಗೇಶ್ವರಿ, ರೋಟರಿ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ,ಜಿಲ್ಲಾ ಸಿಎಸ್‌ಆರ್ ಚೇರ್ಮನ್ ಕಿರಣ್ ರಾರ್ಬಟ್, ರೋಟರಿ ಜಿಲ್ಲಾ ನಿಯೋಜಿತ ಗೌರ್ನರ್ ಸೋಮಶೇಖರ್ ಮುಂತಾದವರು ಹಾಜರಿದ್ದರು.