ಮೈಸೂರು: ಕನ್ನಡ ತಾಯಿ ಭುವನೇಶ್ವರಿ ಚಿತ್ರ ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ
ಸರ್ಕಾರಿ ಕಚೇರಿ ಯಲ್ಲಿ ಚಿತ್ರ ಹಾಕುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕೆಂದು ಸಾಮಾಜಿಕ ಹೋರಾಟಗಾರ ಸಂದೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಕನ್ನಡ ಭಾಷೆ ಮತ್ತು
ನಮ್ಮ ನಾಡಿನ ಸಂಸ್ಕೃತಿ
ಮೇಲೆ ದಬ್ಬಾಳಿಕೆ ಮಿತಿ ಮೀರುತ್ತಿದ್ದು ಸಹಿಸಲಾಸದ್ಯವಾಗಿದೆ, ನಾವು ಕನ್ನಡಿಗರು ನಾಡಿನ ರಾಜಾಧಾನಿಯಲ್ಲಿ ಭಾಷ ಅಲ್ಪ ಸಂಖ್ಯಾತರಾಗಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದಿನ ನಿತ್ಯ ಕನ್ನಡಿಗರ ಮೇಲಿನ ಹಲ್ಲೆಗಳು ಪ್ರಸಾರವಾಗುತ್ತಿರುವುದನ್ನು ನೋಡುತ್ತಿ ದ್ದೇವೆ,ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಮೊದಲಿಗೆ 1985 ರಲ್ಲಿ ಕನ್ನಡ ಕಾವಲು ಪಡೆ ಸಮಿತಿ ಅಧ್ಯಕ್ಷರಾಗಿದ್ದವರು ಅವರಿಗೆ ಸಮಸ್ಯೆಯ ಅರಿವಿದೆ ಹಾಗಾಗಿ ಅವರ ಅವಧಿಯಲ್ಲೇ ಕನ್ನಡ ಬಾವುಟಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದಂತೆ
ಕನ್ನಡ ಭಾಷೆ ಸಂಸ್ಕೃತಿ
ಪ್ರತಿಬಿಂಬವಾಗಿರುವ ತಾಯಿ ಭುವನೇಶ್ವರಿ ಯ ಚಿತ್ರವನ್ನು ಸರ್ಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಹಾಕಬೇಕು ವಿಧಾನಸೌಧ ದ ಮುಂದೆ ಬೃಹತ್ ಭುವನೇಶ್ವರಿ
ಪ್ರತಿಮೆ ನಿರ್ಮಾಣ ಮಾಡಬೇಕು ಹಾಗೂ ಸರ್ಕಾರಿ ಅನುದಾನಿತ ಭಾಷಾ ಅಲ್ಪಸಂಖ್ಯಾತ ಶಾಲೆ ಮತ್ತು ಮದರಾಸಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಬೇಕೆಂದು ಸಂದೇಶ್ ಒತ್ತಾಯಿಸಿದ್ದಾರೆ.
ಕಾರ್ನಾಟಕದಲ್ಲಿ ಕನ್ನಡವೆ ಸಾರ್ವಭೌಮ ವಾಗಬೇಕಾದರೆ ಸರ್ಕಾರ
ತತಕ್ಷಣ ಆದೇಶ ಹೊರಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.