ಮೈಸೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋ ಭಾವನೆ ಮೂಡಿಸಬೇಕೆಂದು ಮೈಸೂರು ಜಿಲ್ಲೆಯ ಉಪ ನಿರ್ದೇಶಕರಾದ ಎಂ.ಪಿ.ನಾಗಮ್ಮ ಸಲಹೆ ನೀಡಿದರು.
ಮೈಸೂರು ಜಿಲ್ಲಾ ಪದವಿ ಪೂರ್ವ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಶೇಷಾದ್ರಿ ಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ಜಿಲ್ಲೆಯಲ್ಲಿ ಫಲಿತಾಂಶ ವೃದ್ಧಿಸಲು ಉಪನ್ಯಾಸಕರು ಕ್ರಮ ವಹಿಸುವಂತೆ ನಾಗಮ್ಮ ಸೂಚಿಸಿದರು.
ವೇದಿಕೆಯು ತಯಾರಿಸಿದ ಸೆಕೆಂಡ್ ಇಯರ್ ಫಿಸಿಕ್ಸ್ ಹ್ಯಾಂಡ್ ಬುಕ್ ಅನ್ನು ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ(ಪ್ರ)ಪ್ರೊ. ಡಾ. ಉಮೇಶ್ ಟಿ.ಕೆ ಅವರು ಬಿಡುಗಡೆ ಮಾಡಿ, ವಿಜ್ಞಾನವು ಧರ್ಮದಲ್ಲಿದೆ ಮತ್ತು ಧರ್ಮವು ವಿಜ್ಞಾನದಲ್ಲಿದೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ರವೀಶ್ ಅವರು ವೇದಿಕೆಯ ಚಟುವಟಿಕೆ ಗಳನ್ನು ತಿಳಿಸಿದರು. ಪ್ರಾಂಶುಪಾಲರಾದ ಎ ರಾಮೇಗೌಡ ಅವರು ವೇದಿಕೆಯ ಕಾರ್ಯಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಬೀಳ್ಕೊಡುಗೆ ಜತೆಗೆ ಭೌತಶಾಸ್ತ್ರ ವಿಷಯದಲ್ಲಿ ಶೇಕಡ 100 ಅಂಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ವತಿಯಿಂದ ನಡೆಸಿದ ಅನೇಕ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಹಾರಾಣಿ ಪದವಿ ಕಾಲೇಜಿನ ಪ್ರೊ. ಡಾ. ಶಿವಲಿಂಗ ಸ್ವಾಮಿ ಅವರು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ.ಬಯಲಾದೀತೇ ಜಗದ ಜಾತಕ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಮೈಸೂರು ಶ್ರಿ ಛಾಯಾ ದೇವಿ ಶಿಕ್ಷಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ಡಾ. ಅಂತೋನಿಪಾಲ್ ರಾಜ್ ಅವರು
ಬೋಧನೆಯಲ್ಲಿ ಶಿಕ್ಷಕರ ಒತ್ತಡ-ಒತ್ತಡದಲ್ಲಿ ಶಿಕ್ಷಕರ ಬೋಧನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ವೇದಿಕೆಯ ಪದಾಧಿಕಾರಿಗಳು, ಪ್ರಾಂಶುಪಾಲರುಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
