ಮದ್ದೂರು‌ ಮೆರವಣಿಗೆ ಮೇಲೆ ಕಲ್ಲು ತೂರಾಟ:ಕರ್ನಾಟಕ ಸೇನಾಪಡೆ‌ ಪ್ರತಿಭಟನೆ

Spread the love

ಮೈಸೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಂ ಪುಂಡರು ಕಲ್ಲು ತೂರಾಟ ನಡೆಸಿದ್ದಾರೆಂದು ಖಂಡಿಸಿ ಕರ್ನಾಟಕ ಸೇನಾಪಡೆ‌ ಸದಸ್ಯರು ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮೆರವಣಿಗೆ ಬರುತ್ತಿದ್ದಂತೆ ಪೂರ್ವ ನಿಯೋಜಿತವಾಗಿ ಮಸೀದಿಯಲ್ಲಿ ಪ್ಲಾನ್ ಮಾಡಿ ಕಲ್ಲುಗಳನ್ನು ಇಟ್ಟುಕೊಂಡು, ರಸ್ತೆಯ ಎಲ್ಲಾ ಲೈಟ್ ಗಳನ್ನು ಹಾಗೂ ಮಸೀದಿ ಲೈಟ್ ಗಳನ್ನು ಆಫ್ ಮಾಡಿ, ಏಕಾಏಕಿ ಕಲ್ಲುಗಳನ್ನು ಮುಸ್ಲಿಂ ಪುಂಡರು ಎಸೆದಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾ ನಿರತರು‌ ಆಕ್ರೋಶ‌ ವ್ಯಕ್ತಪಡಿಸಿದರು.

ತಲತಲಾಂತರ ಗಳಿಂದ ರಾಜ್ಯದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮಾಡುವುದು ಸಾರ್ವಜನಿಕ ರಸ್ತೆಯಲ್ಲಿಯೇ ಹೊರತು ಮುಸ್ಲಿಮರ ರಸ್ತೆಯಲ್ಲಲ್ಲ. ಮುಸ್ಲಿಮರ ಹಬ್ಬಗಳು ನಮ್ಮ ದೇಶದಲ್ಲಿ ಯಾವುದೇ ಗಲಾಟೆಗಳಿಲ್ಲದೆ ನಡೆಯುತ್ತವೆ. ಆದರೆ ದೇಶದ ಬಹು ಸಂಖ್ಯಾತ ಸಹಿಷ್ಣುಗಳಾದ ನಮ್ಮ ಹಿಂದೂಗಳ ಹಬ್ಬಗಳಿಗೆ ಪದೇ ಪದೇ ತೊಂದರೆ ಕೊಡುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ ಎಂದು‌ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದರು.

ಕಳೆದ ವರ್ಷ ನಾಗಮಂಗಲದಲ್ಲಿ ಹಾಗೂ ಇತ್ತೀಚೆಗೆ ಮೈಸೂರಿನ ಉದಯಗಿರಿಯಲ್ಲೂ ಈ ರೀತಿ ಹಿಂದೂಗಳು ಹಾಗೂ ಪೊಲೀಸರ ಮೇಲೆ ಮುಸ್ಲಿಮರು ಕಲ್ಲುತೂರಾಟ ನಡೆಸಿದ್ದರು.

ಮುಖ್ಯಮಂತ್ರಿಗಳು ಮುಸ್ಲಿಮರ ಅತಿಯಾದ ಓಲೈಕೆಗಾಗಿ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮುಸ್ಲಿಮರು ಶಾಂತಿ ಪ್ರಿಯರು ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ವಿಜಯಪುರ ಹಾಗೂ ಹಾವೇರಿಯಲ್ಲಿ ಇದೇ ಮುಸ್ಲಿಮರು ಮೊನ್ನೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲೇಸ್ತಿನ್ ಧ್ವಜ ಹಾರಿಸಿರುವುದು ದೇಶ ದ್ರೋಹದ ಪ್ರಕರಣವಾಗಿದೆ. ಅವರ ಮೇಲೆ ಸರ್ಕಾರ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಕಲ್ಲು ಎಸೆದ ಮುಸ್ಲಿಮರ ಮೇಲೆ ಲಾಠಿಚಾರ್ಜ್ ಮಾಡದೆ ಹಿಂದೂ ಕಾರ್ಯಕರ್ತರು ಹಾಗೂ ಮಹಿಳೆಯರ ಮೇಲೆ ಲಾಠಿಚಾರ್ಜ್ ಮಾಡಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಧರ್ಮಸ್ಥಳ ಪ್ರಕರಣದಲ್ಲಿ, ಚಾಮುಂಡಿ ಬೆಟ್ಟದ ವಿಚಾರದಲ್ಲಿ ಹಾಗೂ ನಾಡ ಧಾರ್ಮಿಕ ಹಬ್ಬ ದಸರಾ ಉದ್ಘಾಟನೆಯಲ್ಲಿ ಹಿಂದೂ ವಿರೋಧಿ ಧೋರಣೆ ತೋರಿದೆ ಎಂದು ತೇಜೇಶ್ ಲೋಕೇಶ್ ಗೌಡ ದೂರಿದರು.

ಶಾಂತಿ ಕಾಪಾಡಲು ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಪೊಲೀಸ್ ಇಲಾಖೆ ಸರ್ಕಾರದ ಗೃಹ ಸಚಿವರ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.

ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ, ಮತ್ತೆ ರಾಜ್ಯದಲ್ಲಿ ಈ ರೀತಿ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಂಡು ಕಲ್ಲೆಸೆದ ಪುಂಡರಿಗೆ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಪ್ರಜೀಶ್, ಮಧುವನ ಚಂದ್ರು, ಗಿರೀಶ್, ಕೃಷ್ಣಪ್ಪ, ಶಿವಲಿಂಗಯ್ಯ, ವರಕೂಡು ಕೃಷ್ಣೆಗೌಡ, ನೇಹ, ಭಾಗ್ಯಮ್ಮ, ಶೋಭಾರಾಣಿಗೌಡ, ಹೊನ್ನೇಗೌಡ, ಪದ್ಮ, ತಾಯೂರು ಗಣೇಶ್, ಸುನಿಲ್, ನಂದಕುಮಾರ, ಹನುಮಂತಯ್ಯ , ಹನುಮಂತೇಗೌಡ, ಬಸವರಾಜು, ರಾಧಾಕೃಷ್ಣ, ರಘು ಅರಸ್, ಎಳನೀರು ರಾಮಣ್ಣ, ದರ್ಶನ್ ಗೌಡ, ಪ್ರದೀಪ್, ಗಣೇಶ ಪ್ರಸಾದ್, ರಘು ಆಚಾರ್, ಸ್ವಾಮಿಗೌಡ, ಚಂದ್ರಶೇಖರ್, ರವೀಶ್, ರವಿನಾಯಕ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.