ಕಾವೇರಿ ವನ್ಯಜೀವಿ ವಿಭಾಗದಲ್ಲಿ ಜಿಂಕೆ ಬೇಟೆ : ವ್ಯಕ್ತಿ ವಿರುದ್ಧ ಪ್ರಕರಣ

Spread the love

ಚಾಮರಾಜನಗರ: ತೋಟದಲ್ಲಿ ಜಿಂಕೆ ಬೇಟೆಯಾಡಿ ಮಾಂಸವನ್ನು ಬೇರ್ಪಡಿಸಿ ಚರ್ಮವನ್ನು ಅಲ್ಲಿಯೇ ಬಿಸಾಡಿ ಹೋಗಿದ್ದ ವ್ಯಕ್ತಿಯ ಮೇಲೆ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ನಾಗರಾಜು ( 40) ಎಂಬಾತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಾವೇರಿ ವನ್ಯ ಧಾಮದ ಕಾಂಪಾರ್ಮೆಂಟ್ 40ರ ಹನೂರು ವನ್ಯಜೀವಿ ವಲಯ ಶಾಗ್ಯ ಶಾಖೆಯ ಎಲ್ಲೇಮಾಳ ವ್ಯಾಪ್ತಿಯ ಅಜ್ಜಿಪುರ ಗ್ರಾಮದ ಸರ್ವೆ ನಂಬರ್ 442/2ರ ಜಮೀನಿನಲ್ಲಿ ಜಿಂಕೆಯನ್ನು ಬೇಟೆಯಾಡಿ ಅದರ ದೇಹವನ್ನು ತುಂಡರಿಸಿ ಮಾಂಸವನ್ನ ಬೇರ್ಪಡಿಸಿ ಜಿಂಕೆಯ ಚರ್ಮವನ್ನು ಅಲ್ಲಿಯೇ ಬಿಟ್ಟು ಹೊಗಲಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜಿಂಕೆ ಬೇಟೆಯಾಡಿದ ಅಜ್ಜಿಪುರ ಗ್ರಾಮದ ನಾಗರಾಜು ಎಂಬಾತನನ್ನ ಗುರುತಿಸಿ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಿರಂಜನ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಗೋಪಾ ಅವರು ಪ್ರಕರಣ ದಾಖಲು ಮಾಡಿದ್ದಾರೆ.