ಚಾಮುಂಡಿ ಬೆಟ್ಟದಲ್ಲಿ ಚಿರತೆ ದರ್ಶನ!

Spread the love

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಲ್ಲಿ ಚಿರತೆಗಳು ಇವೆ ಎಂಬುದಾಗಿ ಬಹಳ ಜನ ಹೇಳುತ್ತಲೇ ಇರುತ್ತಾರೆ.ಒಂದೆರಡು‌ ವರ್ಷಗಳ ಹಿಂದೆ‌ ಸಿದ್ಧಾರ್ಥ‌ ನಗರದ ಲಲಿತಮಹಲ್ ಗೇಟ್‌ ಸಮೀಪದಲ್ಲೇ ಚಿರತೆ‌ ಕಾಣಿಸಿಕೊಂಡು‌ ಆತಂಕ ಸೃಷ್ಟಿ ಯಾಗಿತ್ತು.

ಇದೇ‌ ವರ್ಷ ಇನ್ಫೋಸಿಸ್ ಸಮೀಪ ಕೂಡಾ ಚಿರತೆ ಕಾಣಿಸಿತ್ತು.ಆದರೆ ಇಂದು ಚಾಮುಂಡಿ‌ ಬೆಟ್ಟ ದಲ್ಲಿ ರಸ್ತೆ ಸಮೀಪಾನೆ ಚಿರತೆ ದರ್ಶನವಾಗಿದೆ.

ಮೈಸೂರಿನ ಕೆಎಂಪಿಕೆ‌‌ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಅವರ ಸ್ನೇಹಿತರು‌ ಕಾರಿನಲ್ಲಿ ಚಾಮುಂಡಿ‌ಬೆಟ್ಟಕ್ಕೆ ಹೋಗುವಾಗ ಅಚಾನಕ್ಕಾಗಿ‌ ಚಿರತೆ‌ ಕಾಣಿಸಿದೆ.

ಚಾಮುಂಡಿ ಬೆಟ್ಟದ ‌ರಸ್ತೆ ಗೋಡೆ‌ ಮೇಲೆ ಕುಳಿತಿದ್ದ ಚಿರತೆ‌ಯನ್ನ ಕಂಡು ಕಾರಿನಲ್ಲಿದ್ದವರು ಆಶ್ಚರ್ಯ ಚಿಕಿತರಾಗಿದ್ದಾರೆ.

ಭಯದಿಂದಲೇ ಚಿರತೆಯನ್ನು‌ ವೀಕ್ಷಿಸಿ ವಿಡಿಯೊ‌ ಮಾಡಿದ್ದಾರೆ.ಚಿರತೆ ನಿಧಾನವಾಗಿ ಎದ್ದು ಅದೇ‌ ತಡೆಗೋಡೆ ಮೇಲೆ ಓಡಿದೆ.

ಏನೇ‌ ಆಗಿರಲಿ ಬೆಟ್ಟದ ರಸ್ತೆಯಲ್ಲಿ ದ್ವಿಚಕ್ರ ‌ವಾಹನದಲ್ಲಿ‌ ಹೋಗುವವರು ಮತ್ತಿತರ‌ ವಾಹನ‌ ಸವಾರರು ನಡೆದು ಹೋಗುವವರು ಎಚ್ಚರಿಕೆಯಿಂದ ‌ಸಂಚರಿಸುವ ಅಗತ್ಯವಿದೆ.