ಸೆ.9 ರಂದು ದಲಿತ ಮಹಾಸಭಾ ದಿಂದ ಚಾಮುಂಡಿ ನಡಿಗೆ:ಅನುಮತಿಗೆ ಮನವಿ

Spread the love

ಮೈಸೂರು: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದು ಇದಕ್ಕೆ ಪ್ರತಿಯಾಗಿ ದಲಿತ ಮಹಾಸಭಾ ಚಾಮುಂಡಿ ನಡಿಗೆ ಆಯೋಜಿಸಿದೆ.

ರಾಜಕೀಯಕ್ಕೆ ಹಾಗೂ ಕೋಮುಗಲಭೆ ಸೃಷ್ಟಿಸಲು ಬಳಸಿಕೊಳ್ಳೂತ್ತಿರುವವರ ವಿರುದ್ಧ
ಸೆ.9 ರಂದು ಕುರುಬರಹಳ್ಳಿ ವೃತ್ತದಿಂದ
ಚಾಮುಂಡಿ ನಡಿಗೆ ಮಾಡಲು ನಿರ್ಧರಿಸಿದ್ದು ಅನುಮತಿ ನೀಡುವಂತೆ ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್ ಅವರು ಪೊಲೀಸ್ ಆಯಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಈ ಹಿಂದೆ ನಿಸಾರ್ ಅಹಮದ್ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಹಂಪಾ ನಾಗರಾಜ ಅವರನ್ನು ಕರೆದು ದಸರಾ ಉದ್ಘಾಟಿಸುವ ಸಂದರ್ಭದಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆಯೆಂದು ಹೇಳಿಕೊಳ್ಳುತ್ತಿರುವವರು ಚಕಾರವೆತ್ತಿರಲಿಲ್ಲ. ಆದರೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತರಾಗಿರುವ ಬಾನು ಮಸ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಸರ್ಕಾರ ಅಹ್ವಾನ ಮಾಡಿರುವುದನ್ನು ಕೆಲ ಸಂಘಟನೆಗಳು ವಿರೋಧಿಸುವುದರ ಮೂಲಕ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂದು ಪ್ರಯತ್ನ ನಡೆಯುತ್ತಿದೆ.

ಆದ್ದರಿಂದ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಸುಮಾರು 10000 ಜನರು ದಿನಾಂಕ 9 ರಂದು ಬೆಳಿಗ್ಗೆ 7.30ಕ್ಕೆ ಚಾಮುಂಡಿತಾಯಿಯನ್ನು ರಾಜಕೀಯಗೊಳಿಸದಿರಿ ಹಾಗು ಕೋಮುಗಲಭೆ ಸೃಷ್ಟಿಸದಿರಿ” ಎಂಬ ಘೋಷವಾಕ್ಯದಡಿ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ,ಅದಕ್ಜಾಗಿ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.