ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ-ಎಂ ಡಿ ಪಾರ್ಥಸಾರಥಿ

Spread the love

ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಶ್ರಮವಹಿಸಿ ದುಡಿಯುವ ಕಾಯಕಯೋಗಿಗಳಾದ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ಮಾಜಿ ನಗರಪಾಲಿಕೆ ಸದಸ್ಯ ಎಂ ಡಿ ಪಾರ್ಥಸಾರಥಿ ಹೇಳಿದರು.

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಶನಿವಾರ ಪಾತಿ ಫೌಂಡೇಶನ್ ವತಿಯಿಂದ ನಗರದ ಅಗ್ರಹಾರ ವೃತ್ತದಲ್ಲಿ
ಹಿರಿಯ ಪತ್ರಿಕ ವಿತರಕ ಎಂ ಮಂಜು ಅವರನ್ನು ಗೌರವಿಸಿ ಅವರು ಮಾತನಾಡಿದರು.

ಸುಮಾರು 40 ವರ್ಷಗಳಿಂದ ಪತ್ರಿಕ ವಿತರಕರಾಗಿ,ಹಂಚಿಕೆದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ ಮಂಜು ಪತ್ರಿಕಾ ವಿತರಣೆಯಿಂದಲೇ ಬದುಕು ಕಟ್ಟಿಕೊಂಡವರು, ಇವರ ಸೇವೆ ಅನನ್ಯ ಎಂದು ಪಾರ್ಥಸಾರಥಿ ಬಣ್ಣಿಸಿದರು.

ಈ ಸಂದರ್ಭದಲ್ಲಿ ಚಕ್ರಪಾಣಿ, ಗಣೇಶ್, ಲಕ್ಷ್ಮಣ್, ಲೋಕೇಶ್, ಮಹೇಶ್, ನಾಗೇಶ್, ಪ್ರಕಾಶ್, ಮಹದೇವ್, ಶಿವಕುಮಾರ್, ಲಿಂಗರಾಜು ಮತ್ತಿತರರು ಹಾಜರಿದ್ದರು.