ಗಣಪತಿ ಮೆರವಣಿಗೆ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದನೆ:ಇಬ್ಬರು ಅರೆಸ್ಟ್

Spread the love

ಮೈಸೂರು: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕರ್ತವ್ಯ ನಿರತ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದ ಯುವಕರನ್ನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರವಿಚಂದ್ರ ಹಾಗೂ ಭುವನ್ ಬಂಧಿತರು. ಕುವೆಂಪುನಗರ ಎಂ ಬ್ಲಾಕ್ ನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಕುವೆಂಪುನಗರ ಠಾಣೆ ಸಿಬ್ಬಂದಿಗಳಾದ ಮಾಲಯ್ಯ ಹಾಗೂ ಸುರೇಶ್ ಅವರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಮೆರವಣಿಗೆ ಶಾಲೆ ಬಳಿ ಬಂದಾಗ ರವಿಚಂದ್ರ ಹಾಗೂ ಭುವನ್ ಬಂದು ಡ್ಯಾನ್ಸ್ ಮಾಡುತ್ತಿದ್ದರು.ನಗಾರಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾವು ಹೇಳಿದಂತೆ ಬಾರಿಸಬೇಕೆಂದು ಧಂಕಿ ಹಾಕುತ್ತಿದ್ದರು.

ಈ ವೇಳೆ ಕರ್ತವ್ಯ ನಿರತ ಸಿಬ್ಬಂದಿ ಯುವಕರಿಗೆ ಬುದ್ದಿವಾದ ಹೇಳಿದಾಗ ತಿರುಗಿ ಬಿದ್ದ ರವಿಚಂದ್ರನ್ ಹಾಗೂ ಭುವನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದರು.

ತಕ್ಷಣ ಪಿಎಸ್ಸೈ ಮದನ್ ಕುಮಾರ್ ಅವರಿಗೆ ಸಿಬ್ಬಂದಿ ವಿಷಯ ತಿಳಿಸಿದರು.ಆಗ ಮದನ್ ಕುಮಾರ್ ಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದರು.

ಹಾಗಾಗಿ ರವಿಚಂದ್ರನ್ ಹಾಗೂ ಭುವನ್ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.