ಹೆಚ್.ಡಿ ಕೋಟೆ, ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ‌ ಬೇಟೆ:2 ಕೋಟಿ ನಕಲಿ ಹನ್ಸ್ ವಶ

Spread the love

ಮೈಸೂರು,ಸೆ.2: ಹೆಚ್.ಡಿ ಕೋಟೆ ಹಾಗೂ ಮೈಸೂರು ಜಿಲ್ಲಾ ಪೊಲೀಸರು ಭರ್ಜರಿ‌ ಬೇಟೆ ಮಾಡಿದ್ದು,ಎರಡು ಕೋಟಿ ರೂ.ಗೂ ಅಧಿಕ ಮೌಲ್ಯದ ನಕಲಿ ಹನ್ಸ್( ತಂಬಾಕು) ವಶಕ್ಕೆ ಪಡೆದಿದ್ದಾರೆ.

ಹೆಚ್.ಡಿ ಕೋಟೆಯ ಮದ್ದೂರು ಪಟ್ಟಣದಲ್ಲಿ ಎರಡು ಕೋಟಿಗೂ ಅಧಿಕ ಮೌಲ್ಯದ ಹನ್ಸ್ ವಶಕ್ಕೆ ಪಡೆಯಲಾಗಿದೆ.

ಬೆಟ್ಟಹಳ್ಳಿ ಸರ್ವೇ 1/17, 18 ರಲ್ಲಿ ನಕಲಿ ಹನ್ಸ್ ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಎ1 ಶೈನ್ ಪ್ರಸಾದ್ , ಎ2 ಪ್ರಭುಸ್ವಾಮಿ, ಎ3 ಅಶ್ವಿನಿ ಕೆ.ಶೈನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಸ್ಥಳದಲ್ಲಿ 75 ಲಕ್ಷ ಮೌಲ್ಯದ 3 ಹನ್ಸ್ ಪ್ಯಾಕೆಟ್,ಹನ್ಸ್ ತಯಾರು ಮಾಡುವ ಮಿಷನ್ ಗಳು, 16 ಸಾವಿರ ಮೌಲ್ಯದ ಚೀಲ, ಹೊಲಿಗೆ ಹಾಕುವ 2 ಮಿಷನ್ , 96 ಸಾವಿರದ 4 ಹನ್ಸ್ ಪ್ಯಾಕೇಜ್ ಚೀಲಗಳು, ಹಳೆಯ ಹನ್ಸ್ ಪ್ಯಾಕೆಟ್ ಚೀಲಗಳು 146 (ಮೌಲ್ಯ 17 ಲಕ್ಷದ 57 ಸಾವಿರ), 20 ಲೀಟರ್ ಅಳತೆಯ ಟಿಪಿಆರ್ ಕೆಮಿಕಲ್ ಕ್ಯಾನ್ (ಮೌಲ್ಯ 8.40 ಲಕ್ಷ), ಲೇಬಲ್ ರೋಲ್ ,ಸಣ್ಣ ಸಣ್ಣ ಪ್ಯಾಲೆಟ್ ರೋಲ್, 2 ಲಕ್ಷ ಮೌಲ್ಯದ, ಕೆಂಪು ಬಣ್ಣದ ಹನ್ಸ್ ಪ್ಯಾಕೆಟ್ ಪೇಪರ್ 6 ಚೀಲ, ನೀಲಿ ಬಣ್ಣದ ಹನ್ಸ್ ಪ್ಯಾಕೆಟ್ ತುಂಬವ ಎರಡು ಪ್ಲಾಸ್ಟಿಕ್ ಚೀಲ (87 ಸಾವಿರ),‌ಸೇರಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.