ಜಯಪುರ: ರಾಜಸ್ಥಾನದ ರಾಜ್ಸಮಂದ್ ಕ್ಷೇತ್ರದ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿ ಅವರು ಇದ್ದ ಕಾರು ಅಪಘಾತವಾಗಿ ತೀವ್ರ ಗಾಯಗೊಂಡಿದ್ದಾರೆ.
ಉದಯಪುರ-ರಾಜ್ಸಮಂದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಶಾಸಕಿ ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ 1.30 ರ ಸುಮಾರಿಗೆ ಉದಯಪುರದ ಅಂಬೆರಿ ಬಳಿ ಗುಜರಾತ್ ನೋಂದಣಿಯ ವಾಹನ ಬೇರೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಶಾಸಕಿ ದೀಪ್ತಿ ಮಹೇಶ್ವರಿ ಅವರ ಆಪ್ತ ಸಹಾಯಕ ಜೈ ಮತ್ತು ಚಾಲಕ ಧರ್ಮೇಂದ್ರ ಅವರೊಂದಿಗೆ ಪ್ರಯಾಣಿಸುತ್ತಿದ್ದರು.
ಮೂವರನ್ನೂ ತಕ್ಷಣ ಚಿಕಿತ್ಸೆಗಾಗಿ ಉದಯಪುರದ ಗೀತಾಂಜಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೀಪ್ತಿ ಮಹೇಶ್ವರಿ ಅವರ ಪಕ್ಕೆಲುಬಿಗೆ ತೊಂದರೆಯಾಗಿದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿದೆ.