(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: 14 ವರ್ಷದೊಳಗಿನ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಆರ್. ಸಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ಹಾಗೂ ಕನ್ನಡ ಮಾಧ್ಯಮ ಶಾಲೆಯ ಬಾಲಕರು ವಿಜೇತರಾಗಿದ್ದಾರೆ.
ಪಂದ್ಯದಲ್ಲಿ ಒಂದೇ ಶಾಲೆಯ 2 ತಂಡಗಳು ಭರ್ಜರಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ.
ಈ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಶಾಲೆಯ ಆಡಳಿತ ಮಂಡಳಿ ವಿಜೇತ ತಂಡವನ್ನು ಅಭಿನಂದಿಸಿದೆ.
ಪಟ್ಟಣದ ಸರ್ಕಾರಿ ಶ್ರೀ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 14 ವರ್ಷದ ಒಳಪಟ್ಟ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ಬಾಲಕರು ಹಾಗೂ ಬಾಲಕಿಯರು ಭಾಗವಹಿಸಿದ್ದರು.
ಅಂತಿಮವಾಗಿ ಬಾಲಕಿಯರ ವಿಭಾಗದಲ್ಲಿ ಪಟ್ಟಣದ ಆರ್. ಸಿ. ಎಂ. ಆಂಗ್ಲ ಮಾಧ್ಯಮ ಶಾಲೆ ಹಾಗೂ ತಾಲ್ಲೂಕಿನ ಕಾಮಗೆರೆ ಎಸ್. ಡಿ. ಎ ಶಾಲೆಯ ಬಾಲಕಿಯರ ನಡುವೆ ಸೆಣೆಸಾಟ ನಡೆದು ಆರ್. ಸಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿಜೇತರಾದರು.
ಅದೇ ರೀತಿ ಬಾಲಕರ ವಿಭಾಗದಲ್ಲಿ ಸಿಂಗನಲ್ಲೂರು ಗ್ರಾಮದ ನಿಸರ್ಗ ಶಾಲೆ ಹಾಗೂ ಪಟ್ಟಣದ ಆರ್. ಸಿ. ಎಂ ಕನ್ನಡ ಮಾಧ್ಯಮ ಶಾಲೆಯ ಬಾಲಕರ ನಡುವಿನ ಪಂದ್ಯಾವಳಿಯಲ್ಲಿ ಆರ್. ಸಿ. ಎಂ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ವಿಜೇತರಾದರು. ಒಂದೇ ಶಾಲೆಯ 2 ತಂಡಗಳು ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗೆಲುವು ಸಾಧಿಸಿದ ಬಾಲಕರು ಹಾಗೂ ಬಾಲಕಿಯರ ತಂಡಗಳನ್ನು ಶಾಲಾಡಳಿತ ಅಭಿನಂದಿಸಿತು,ಜತೆಗೆ ಮುಂದಿನ ಪಂದ್ಯಾವಳಿಯನ್ನು ಕೂಡ ಉತ್ತಮವಾಗಿ ಆಡುವಂತೆ ಪ್ರೋತ್ಸಾಹ ನೀಡಿ ಅಭಿನಂದಿಸಿತು.

ಬಾಲಕಿಯರ ತಂಡವನ್ನು ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟೆರ್ ಲೆತಿಷಿಯ ಅವರು ಹಾಗೂ ಬಾಲಕರ ತಂಡವನ್ನು ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಅಣ್ಣಮ್ಮ ಅವರು ಶ್ಲಾಘಿಸಿದರು.
ಈ ವೇಳೆ ಶಾಲೆಯ ಎಲ್ಲಾ ಶಿಕ್ಷಕರು ಉಭಯ ತಂಡಗಳಿಗೂ ಅಭಿನಂದನೆ ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದರು.