ಮೈಸೂರು: ದಸರಾ ಉದ್ಘಾಟಿಸಲು ಬಾನು ಮುಸ್ತಾಕ್ ರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದಿರುವ ಉಪಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಸಮಂಜಸ ಆಯ್ಕೆ ಅಲ್ಲ. ಯಾರು ಏನೇ ಹೇಳಿದರೂ ದಸರಾ ಧಾರ್ಮಿಕ ಮೂಲವಾದ ಆಚರಣೆ. ಮೈಸೂರು ಮಹಾರಾಜರುಗಳಿಂದ, ನೂರಾರು ವರ್ಷಗಳ ಹಿಂದೆ ಪ್ರಾರಂಭವಾದ ಧಾರ್ಮಿಕ ನಾಡಹಬ್ಬ ದಸರಾ, ಧಾರ್ಮಿಕತೆಯಲ್ಲಿ ನಂಬಿಕೆ ಇಲ್ಲದವರು ಮತ್ತು ದೇವರ, ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ಲದವರು ಈ ದಸರಾ ಉದ್ಘಾಟಿಸುವುದು ಅತ್ಯಂತ ಖಂಡನೀಯ ಎಂದು ಈ ವೇಳೆ ಕರ್ನಾಟಕ ಸೇನಾ ಪಡೆ ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.

ಭಾನು ಮುಷ್ತಾಕ್ 2023ರ ಜನ ಸಾಹಿತ್ಯ ಕನ್ನಡ ಸಮ್ಮೇಳನದಲ್ಲಿ ಕನ್ನಡ ಬಾವುಟಾನ ಅರಿಶಿಣ ಕುಂಕುಮ ಮಾಡಿ, ಉದ್ದೇಶಪೂರ್ವಕವಾಗಿ ನಮ್ಮನ್ನು ದೂರ ಇಡಲು ಹೆಣ್ಣನ್ನು ದೇವತೆ ಮಾಡಿ ಕೂರಿಸಿ ದೌರ್ಜನ್ಯ ಮಾಡೋತರ ಭುವನೇಶ್ವರಿ ಅಂತ ಮಾಡಿದ್ದೀರಿ ಎಂದು ಲೇವಡಿ ಮಾಡಿದ್ದರು. ದೇಶದ ಸಂಸ್ಕೃತಿ, ಆಚಾರ ವಿಚಾರಗಳಿಗೆ ಗೌರವ ಕೊಡದೆ ಇರುವ ಯಾರೇ ಆದರೂ ನಮ್ಮ ಧಾರ್ಮಿಕ ನಾಡಹಬ್ಬವನ್ನು ಉದ್ಘಾಟಿಸುವ ಅರ್ಹತೆ ಇಲ್ಲ ಎಂದು ಹೇಳಿದರು.
ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಭಾನು ಮುಷ್ತಾಕ್ ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿ, ಪುಷ್ಪಾರ್ಚನೆ ಮಾಡಿ ಮಂಗಳಾರತಿ ತೆಗೆದುಕೊಳ್ಳುತ್ತಾರಾ ಎಂದು ಕಾರವಾಗಿ ಪ್ರಶ್ನಿಸಿದರು.
ಅರಿಶಿಣ ಕುಂಕುಮ, ಭುವನೇಶ್ವರಿಯ ಬಗ್ಗೆ ದ್ವೇಷದ ಭಾವನೆಯನ್ನು ಹೊಂದಿರುವ, ಕನ್ನಡದಿಂದ ಮುಸಲ್ಮಾನರನ್ನು ಹೊರಗಿಟ್ಟಿದ್ದೀರಿ ಎಂದು ಹೇಳಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ನಮ್ಮೆಲ್ಲರಿಗೂ ಕನ್ನಡ ಮಾತ್ರಭಾಷೆ, ಆದರೆ ನಿಮ್ಮ ಧರ್ಮೀಯರಿಗೆ ನಿಮಗೆ ಕನ್ನಡ ಮಾತೃ ಭಾಷೆಯಾಗಿದಿಯಾ. ನೀವು ಕನ್ನಡವನ್ನು ಮಾತೃ ಭಾಷೆಯಾಗಿ ಸ್ವೀಕರಿಸಿದ್ದೀರಾ ಎಂದು ಕೇಳಲು ಬಯಸುತ್ತೇವೆ ಎಂದು ಪ್ರತಿಭಟನಾ ನಿರತರು ಪ್ರಶ್ನಿಸಿದರು.
ನಮ್ಮ ರಾಜ್ಯದಲ್ಲಿ ಅನೇಕ ಹಿರಿಯ ಘಟಾನುಘಟಿ ಸಾಧಕರುಗಳಿದ್ದಾರೆ. ಅದರಲ್ಲಿ ವಿಶೇಷವಾಗಿ ಮಾಜಿ ಪ್ರಧಾನಿ, ಮಣ್ಣಿನ ಮಗ, ಹೆಚ್ ಡಿ ದೇವೇಗೌಡರನ್ನೋ, ಕನ್ನಡದ ಕಟ್ಟಾಳು ಕನ್ನಡ ಚಳವಳಿಗಳ ಅಗ್ರಮಾನ್ಯ ನಾಯಕ ಹೋರಾಟಗಾರ ವಾಟಾಳ್ ನಾಗರಾಜ್ ರನ್ನೋ, ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಪಡೆದ ನಟ ಅನಂತನಾಗ್ ರನ್ನೋ ಅಥವಾ ಮಹಿಳೆಯರೇ ಉದ್ಘಾಟನೆ ಮಾಡಬೇಕೆಂದರೆ ಸಾವಿರಾರು ಗಿಡಗಳನ್ನು ನೆಟ್ಟಿರುವ ಸಾಲುಮರದ ತಿಮ್ಮಕ್ಕನನ್ನೋ, ಸಮಾಜ ಸೇವಕಿ ಕೊಡುಗೈದಾನಿ ಇನ್ಫೋಸಿಸ್ ನ ಸುಧಾ ಮೂರ್ತಿಯವರನ್ನೋ ಅಥವಾ ಇನ್ನು ವಿಶೇಷವಾಗಿ ಈ ಭೂಕರ್ ಪ್ರಶಸ್ತಿ ಬರಲು ಮುಖ್ಯ ಕಾರಣಕರ್ತರಾಗಿರುವ ಅನುವಾದಕಿ ದೀಪ ಬಸ್ತಿ ಅವರನ್ನು ದಸರಾ ಉದ್ಘಾಟಕರನ್ನಾಗಿ ಮಾಡಬೇಕು ಎಂದು ಆಗಹಿಸಿದರು.
ಹೇಗಿದ್ದರೂ ಡಿಸೆಂಬರ್ ನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನು ಮುಷ್ತಾಕ್ ರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆಯಲ್ಲಾ ಹಾಗಾಗಿ ದಸರಾ ಉದ್ಘಾಟನೆಗೆ ಬೇರೆ ಸಾಧಕರನ್ನು ಆಯ್ಕೆ ಮಾಡಿ ಎಂದು ಒತ್ತಾಯಿಸಿದರು.
ಉಪಮುಖ್ಯಮಂತ್ರಿಗಳು ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ, ಎಂದು ಹೇಳಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹಿಂದೂಗಳ ಆರಾಧ್ಯ ದೈವ, ನಾಡಿನ ದೇವತೆ ಹಿಂದೂಗಳ ಆಸ್ತಿ ಅಲ್ಲದೆ ಮತ್ಯಾರದ್ದು. ಚಾಮುಂಡಿ ಬೆಟ್ಟ ಮೈಸೂರು ಮಹಾರಾಜರ ಆಸ್ತಿ. ನಿಮಗೆ ಧೈರ್ಯವಿದ್ದರೆ ಮಸೀದಿಗಳು ಮುಸ್ಲಿಂರ ಆಸ್ತಿಯಲ್ಲ ಹಾಗೂ ಚರ್ಚ್ ಗಳು ಕ್ರಿಶ್ಚಿಯನ್ ರ ಆಸ್ತಿಯಲ್ಲ ಎಂದು ಹೇಳಿ ನೋಡೋಣ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಭಟನಾಕಾರರು ಸವಾಲು ಹಾಕಿದರು.
ಈ ಕೂಡಲೇ ಮುಖ್ಯಮಂತ್ರಿಗಳು ಹಿಂದೂ ಕನ್ನಡಿಗರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗದಂತೆ, ಭುವನೇಶ್ವರಿ ಕನ್ನಡ ಬಾವುಟ ವಿರೋಧಿ ಬಾನು ಮುಷ್ತಾಕ್ ಅವರ ಹೆಸರನ್ನು ದಸರಾ ಉದ್ಘಾಟನೆಯಿಂದ ಕೈ ಬಿಡಬೇಕು, ಇಲ್ಲದಿದ್ದರೆ ದಸರಾ ಉದ್ಘಾಟನೆ ದಿನ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ಪ್ರಭುಶಂಕರ್, ಗೋಲ್ಡನ್ ಸುರೇಶ್, ಪ್ರಜೀಶ್, ಸಿಂದುವಳ್ಳಿ ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ವರಕೂಡು ಕೃಷ್ಣೇಗೌಡ, ನೇಹ, ಭಾಗ್ಯಮ್ಮ, ಹೊನ್ನೇಗೌಡ, ಶಿವಲಿಂಗಯ್ಯ, ಮಹದೇವಸ್ವಾಮಿ, ಹನುಮಂತಯ್ಯ, ನಂದಕುಮಾರ್, ಡಾ.ನರಸಿಂಹೇಗೌಡ, ಡಾ . ಶಾಂತರಾಜೇಅರಸ್, ರಾಧಾಕೃಷ್ಣ, ನಾರಾಯಣ ಗೌಡ, ಕುಮಾರ್, ರಘುಅರಸ್, ನಾಗರಾಜು, ಗೀತಾಗೌಡ, ಅಶೋಕ್, ಆನಂದ್ ಗೌಡ, ರಘು ಆಚಾರ್, ದರ್ಶನ್ ಗೌಡ, ಎಳನೀರು ರಾಮಣ್ಣ, ಪ್ರದೀಪ್, ರವಿ ಒಲಂಪಿಯಾ, ಮೂರ್ತಿಲಿಂಗಯ್ಯ, ಗಣೇಶ್ ಪ್ರಸಾದ್, ಬಸವರಾಜು, ರಾಮಕೃಷ್ಣೇಗೌಡ, ಹನುಮಂತೇಗೌಡ, ಚಂದ್ರಶೇಖರ್, ಸ್ವಾಮಿ ಗೌಡ, ತ್ಯಾಗರಾಜು, ಪ್ರಭಾಕರ್, ರವೀಶ್, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.