ಆರ್ ಟಿ ಐ ನ್ಯೂಸ್ ಪೇಪರ್ ಹೆಸರಲ್ಲಿ ಡಾಕ್ಟರ್ ಗೆ ಬ್ಲಾಕ್ ಮೇಲ್;ಎಫ್ಐಆರ್

Spread the love

ಮೈಸೂರು: ಮೈಸೂರಿನ ತಿಲಕ್ ನಗರದಲ್ಲಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿ ಅಕೌಂಟ್ಸ್ ಆಫೀಸರ್ ಗೆ ಆರ್ ಟಿ‌ಐ ನ್ಯೂಸ್ ಪೇಪರ್ ಹೆಸರಿನಲ್ಲಿ ಬ್ಲಾಕ್ ಮಾಡಿದ ಪ್ರಕರಣ ನಡೆದಿದೆ.

ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಬೆದರಿಸಿ 25 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.ಹಣ ನೀಡದಿದ್ದಲ್ಲಿ ಆರೋಗ್ಯ ಸಚಿವರಿಗೆ,ಲೋಕಾಯುಕ್ತಕ್ಕೆ ದೂರು ನೀಡಿ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿಯ ಅಂಕಿತ ಅಧಿಕಾರಿ ಡಾ.ಕಾಂತರಾಜು ಎಂಬುವರು ಪ್ರಕರಣ ದಾಖಲಿಸಿದ್ದರು.

ಈ ಸಂಭಂಧ ಆರ್ ಟಿ ಐ ನ್ಯೂಸ್ ಪೇಪರ್ ನ ಇಬ್ಬರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಾಪ್ ಎಂಬಾತನನ್ನು ಬಂಧಿಸಲಾಗಿದ್ದು, ಹರೀಶ್ @ ರಾಮು ತಲೆಮರೆಸಿಕೊಂಡಿದ್ದಾನೆ.

ಈ ಹಿಂದೆ ಹುಣಸೂರಿನಲ್ಲಿ ಹರೀಶ್ @ರಾಮು ವಿರುದ್ದ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಸುಮಾರು ಮೂರು ತಿಂಗಳ ಹಿಂದೆ ಆರೋಪಿಗಳು ಡಾ.ಕಾಂತರಾಜು ಅವರನ್ನ ಸಂಪರ್ಕಿಸಿ ತಮ್ಮ ಹಾಗೂ ತಮ್ಮ ಪತ್ನಿಯ ಚಲನವಲನಗಳನ್ನ ಸ್ಟಿಂಗ್ ಅಪರೇಷನ್ ಮಾಡಿ ವಿಡಿಯೋ ಮತ್ತು ದಾಖಲೆಗಳನ್ನ ಸಂಗ್ರಹಿಸಿದ್ದೇವೆ.ಸಿದ್ದಾರ್ಥ ನಗರದಲ್ಲಿ ಇರುವ ನಿಮ್ಮ ಮಡದಿಯ ಕ್ಲಿನಿಕ್ ನಲ್ಲಿ ಮಹಿಳಾ ರೋಗಿಗಳಿಗೆ ಪರೀಕ್ಷಿಸುವಾಗ ವಿಡಿಯೋಗಳನ್ನ ಮಾಡಿದ್ದೇವೆ.ನಿಮ್ಮ ಎಲ್ಲಾ ಕಾರ್ಯಚಟುವಟಿಕೆಗಳ ವಿವರ ನಮ್ಮ ಬಳಿ ಇದೆ.ಇವುಗಳನ್ನ‌ ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರಿಸುತ್ತೇವೆ,ನಿಮ್ಮ ವಿರುದ್ದ ಪ್ರತಿಭಟನೆ ಮಾಡುತ್ತೇವೆ,ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸುತ್ತೇವೆ,ಆರೋಗ್ಯ ಸಚಿವರಿಗೆ ದೂರು ನೀಡಿ ಸಸ್ಪೆಂಡ್ ಮಾಡಿಸುತ್ತೇವೆ.ನಿಮ್ಮ ಕುಟುಂಬ ಹಾಗೂ ರೋಗಿಗಳ ಮುಂದೆ ಅವಮಾನ ಮಾಡುತ್ತೇವೆ ಎಂದೆಲ್ಲಾ ಬೆದರಿಕೆ ಹಾಕಿದ್ದಾರೆ.

25 ಲಕ್ಷ ನೀಡಿದ್ರೆ ಇದನ್ನೆಲ್ಲಾ ನಿಲ್ಲಿಸುವುದಾಗಿ ತಿಳಿಸಿ,ಆಗಸ್ಟ್ 25 ರಂದು ಹೂಟಗಳ್ಳಿ ಸಿಗ್ನಲ್ ಲೈಟ್ ಬಳಿ ಕರೆಸಿಕೊಂಡು ಕಾಂತರಾಜು ಅವರಿಗೆ ಬೆದರಿಕೆ ಹಾಕಿದ್ದಾರೆ.

ಆರೋಪಿಗಳ ಕಿರುಕುಳಕ್ಕೆ ಬೇಸತ್ತ ಡಾ.ಕಾಂತರಾಜು ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹರೀಶ್ @ ರಾಮು ಹಾಗೂ ಪ್ರತಾಪ್ ವಿರುದ್ದ ಎಫ್ಐಆರ್ ದಾಖಲಿಸಿದ ಪೊಲೀಸರು ಪ್ರತಾಪ್ ಎಂಬಾತನನ್ನ ಬಂಧಿಸಿದ್ದಾರೆ,ಹರೀಶ್@ರಾಮು ಬಂಧನಕ್ಕೆ ಬಲೆ ಬೀಸಿದ್ದಾರೆ.