ಮೈಸೂರು: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಚೆರೀಶ್, ರೆಲೀಶ್ ಮತ್ತು ಲಿಯೊ ಜಿಲ್ಲಾ ವತಿಯಿಂದ 9 ನೇ ಹಸಿವು ಮುಕ್ತ ಸೇವಾ ಕಾರ್ಯಕ್ರಮದಡಿ ಗೌರಿ ಹಬ್ಬದ ಪ್ರಯುಕ್ತ ಆಹಾರ ವಿತರಣೆ ಕಾರ್ಯ ಹಮ್ಮಿಕೊಳ್ಳಲಾಯಿತು.
ಮೈಸೂರಿನ ಜಯದೇವ ಹೃದಯ ಆಸ್ಪತ್ರೆ ಮುಂಭಾಗ ಸುಮಾರು 500 ಮಂದಿಗೆ ಆಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ 317ಜಿಯ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ.ಎನ್. ಕೃಷ್ಣೆಗೌಡ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಫೀಸ್ ಪೋಸ್ಟರ್ ಕಂಟೆಸ್ಟನ ಜಿಲ್ಲಾ ಅಧ್ಯಕ್ಷ ಲಯನ್ ಸಿ.ಆರ್ .ದಿನೇಶ್ ಮತ್ತು ವಲಯ ಅಧ್ಯಕ್ಷ ಲಯನ್ ಅರುಣ್ ಮಂಡಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಮರಿಯಾ ಜ್ಯೋತಿ ಡಿಮೆಲ್ಲೊ, ಸುನಿಲ್, ಲಕ್ಷ್ಮಣ್, ಮಲ್ಲೇಶ್, ಅನಿಲ್ ಕುಮಾರ್, ಸಿನಿತಾ ಡಿಮೇಲ್ಲೊ,ಆರ್ಯ,ಮಲ್ಲೇಶ್, ಪ್ರಕಾಶ್, ರವೀಂದ್ರ, ಪ್ರವೀಣ್, ನೋಫೆಲ್ , ಅನಘ ಮತ್ತು ಲಿಯೋ ಸೃಜನ್ ಹಾಜರಿದ್ದರು.
